ಕರುನಾಡು
ರಚನೆ : ನೆಟ್ಕಲ್ ರಾಮಚಂದ್ರ
----------------------------------
ಗಂಧ ಚಂದನದ ಕರುನಾಡೆ ಗಿರಿ ಶಿಖರ ಕಣಿವೆಗಳ ಬೀಡೆ ಕವಿ ಕವಿತ್ರಿ ಸಾಧಕರ ನೆಲೆ ಬೀಡೆ ನಿನ್ನಂತ ನಾಡು ಎಲ್ಲಿದೆ ಕರುನಾಡೆ ತ್ರಿವರ್ಣ ಧ್ವಜ ತಯಾರಿಸುವ ಊರೇ ಗರಿಗರಿ ನೋಟು ಮುದ್ರಿಸುವ ಊರೇ ವಿಶ್ವಖ್ಯಾತಿ ಪಡೆದ ಸಿಲಿಕಾನ್ ಸಿಟಿ ಊರೇ ಪ್ರಖ್ಯಾತ ಆಟಗಾರರು ನಟ ನಟಿಯರ ಊರೆ ಭತ್ತ ರಾಗಿ ಜೋಳ ಬೆಳೆಯುವ ಸಿರಿಯೇ ಕೊಡಚಾದ್ರಿ ಆಗುಂಬೆ ಶಿಖರಗಳ ಸಿರಿಯೇ ಕಾವೇರಿ ಕೃಷ್ಣ ತುಂಗೆ ಹರಿಯುವ ಸಿರಿಯೇ ಬಂಡಿಪುರ ನಾಗರಹೊಳೆ ಹಸಿರುಟ್ಟ ವನಸಿರಿಯೇ ಗಂಗ ಕದಂಬ ಹೊಯ್ಸಳರು ಆಳಿದ ನಾಡೆ ಕಲೆ ಸಾಹಿತ್ಯ ಸಂಸ್ಕೃತಿ ತುಂಬಿದ ನಾಡೆ ಕಲ್ಲಿನಲ್ಲಿ ನೃತ್ಯ ಮಾಡಿಸಿದ ಶಿಲ್ಪಕಲೆ ನಾಡೆ ಎಲ್ಲಮ್ಮ, ಮಾದಪ್ಪ, ಶ್ರೀಕಂಠನ, ನೆಲೆನಾಡೆ
----------------------------------
ನೋಂದಣಿ ಐಡಿ : KPFS2-9870