ಅವಳು!
ರಚನೆ : ಶೃಂಗಾರ್ ಬಿ.ಎಲ್
----------------------------------
ಬೆಳದಿಂಗಳೇ ನಾಚುವ ಚೆಲುವೆ ನೀನ್ಯಾರೆ ನನ್ನಾತ್ಮದ ಪದಗಳಲಿ ಅವಿತಿರುವ ತಾರೆ ಶಶಿಯಂತೆ ಬೆಳಗೆನು ನಾನು ಈ ಧರೆಯ ಅದಕಿಂತಲೂ ಮಿಗಿಲು ಈ ಪ್ರೇಮಿಯ ಹೃದಯ ಅವಳಿಂದ ಮಾತೆಂಬ ಮಳೆ ಹನಿಯು ಬರದೆ, ಬರುವ ಸುಳಿವು ಇರದೆ ಸೃಷ್ಟಿಯ ಏರುಪೇರಾಗಿಸಿದ ಅಂದಗಾರ್ತಿ ಅವಳ ನಾ ಅರಿಯಲಾಗದೆ ಸೋತಿಹೆನು ಪೂರ್ತಿ ಸೆರೆಯಾಗಿಹೆ ನಾ ಭಾವನೆಗಳ ಭವಬಂಧನದೊಳಗೆ ಭಾವನೆಗಳೇ ಈ ಬರಹ ಬರದಾದೆಯ ನೀ ಬಳಿಗೆ ಕಲ್ಪನೆಗಳ ಕದತಟ್ಟಿ ಕಾಣುವೆ ಸೌಂದರ್ಯ ಕಾಣದಾದರೇನು, ನಿನ್ನ ಪ್ರೀತಿಸುವುದೇ ನನ್ನ ಕಾರ್ಯ ಅವಳ ನೆನೆದು ನಾ ಕುಳಿತಿರುವೆ ಅರವಿರದೇ ಹಗಲಿರುಳು ಬಡಪಾಯಿ ಹೃದಯಕೆ ಬರುವುದೆಂದು ಬೆಳದಿಂಗಳು ಬಂದೇ ಬರುವುಳು ಒಂದು ದಿನ, ಅವಳೊಂದಿಗೆ ಸೇರುವೆ ನಾ ಬರುವಳವಳೇ ನನ್ನವಳು, ಅವಳೇ ನನ್ನವಳು..!
----------------------------------
ನೋಂದಣಿ ಐಡಿ : KPFS2-9868