Submission 6764

ಹುಸಿಯಾಡುವ ಕವಿ

ರಚನೆ : ತನುಶ್ರೀ ಬಿ ಎಸ್

----------------------------------

ಚಂದಿರನ ಬಿಂಬವೊಲಿದು ಪೂರ್ಣಿಮೆಯು ಜನಿಸಿದೆ ಬಿಂಬದ ಬೆಳಕನನುಸರಿಸಿ ಮೊಗ್ಗೊಂದು ಅರಳಿದೆ.. ತಂಗಾಳಿಯು ಒಣಗಿದೆಲೆಯ ಮಾದುರ್ಯವ ಹಂಚಿ ಹೂವಿನ ಬಣ್ಣವ ಹೊತ್ತು ಸಾಗಿದೆ... ಅಲ್ಲೋರ್ವ ಕುಳಿತಿರುವ ಅನಾಮಧೇಯ, ಅವ ಅಕ್ಷರಗಳ ತಾಳ ಬಲ್ಲವನು ಭಾವನೆಗಳ ಕಡಲ ಒಡೆಯನು! ಈಗಷ್ಟೇ ಅವನೆದೆಯಲ್ಲಿ ಚಿಂತನೆಯ ಮಳೆಸುರಿದಿದೆ ಕತ್ತಲಲ್ಲೂ ನಸುನಗುವ ಹೂವಿನ ಬಣ್ಣದಿ ಚಂದಿರನ ಮಿಂದೇಳಿಸುವ ಯೋಜನೆ ಇವನದಾಗಿದೆ.. ಬೆಳದಿಂಗಳೊಡೆಯನಿಗೆ ಬಣ್ಣ ನೀಡಬಯಸಿರುವನು ತನ್ನ ಚಿಂತನೆಯ ಹಗರಣದೊಳು ಜಗವ ಸಿಲುಕಿಸಿ ಕಾಣದ ಕಾವ್ಯವ ಸಾರಬಲ್ಲ ಹುಸಿಯಾಡುವ ಕವಿ ಇವನು.

----------------------------------

ನೋಂದಣಿ ಐಡಿ : KPFS2-9863

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top