Submission 6732

ಕೆಂದಳ(ಕೆಂಪುದಳ)

ರಚನೆ : ಗುಣಗಿರಿಶ

----------------------------------

ಕರುನಾಡ ಪತಾಕೆಯಲ್ಲಿ ಬೆರೆತಿದೆ ಕೆಂದಳ ತಾಯಿ ಭುವನೇಶ್ವರಿಗೆ ಸಮರ್ಪಿತ ಕೆಂದಳ। ಉರಿವ ಅಗ್ಗಿಷ್ಟಿಕೆಯೊಳು ನಿಗಿ-ನಿಗಿ ಕೆಂದಳ ಶೃಂಗಾರ ಮಿಥುನದಿ ಮೈದುಂಬುವ ಕೆಂದಳ। ಹೆಣ್ಣಿಗೂ ಮಾಸದಿ ಋತುಸ್ರಾವದ ಕೆಂದಳ ಜೀವ ಸೃಷ್ಟಿಗೆ ಸುಪ್ತಚೇತನವಾಗಿಹ ಕೆಂದಳ। ಜೀವ-ಜಂತುವಿನ ಉಸಿರು ನೆತ್ತರ ಕೆಂದಳ ಸಮೃದ್ಧಿ ಶುಭದ ಸಂಕೇತವಾಗಿದೆ ಕೆಂದಳ। ಕಾರ್ಮುಗಿಲೊಡಲಲಿ ಸಿಡಿಲ್ಮಿಂಚಿನ ಕೆಂದಳ ಭುವಿಯ ಪಚ್ಚೆ ಸಾಲಿಗೆ ವರ್ಷಧಾರೆ ಕೆಂದಳ। ಅರುಣೋದಯ ಸೂರ್ಯಾಸ್ತಗಳಲಿ ಕೆಂದಳ ಹೊಳೆವ ಶಶಿ-ತಾರೆಯ ಹಾಲ್ಬೆಳಕಲಿ ಕೆಂದಳ। ಋತುಮಾನದ ಸೊಭಗಿನಲ್ಲಡಗಿದೆ ಕೆಂದಳ ಇದುವೆ ಸೃಷ್ಟಿಯ ಚಲನೆಗೆ ಒಲವಿನ ಕೆಂದಳ।

----------------------------------

ನೋಂದಣಿ ಐಡಿ : KPFS2-9833

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top