Submission 6728

ನಿನ್ಯಾರಿಗಾದೊಡೆ...

ರಚನೆ : ಹರೀಶ್ ಹೆಡ್ಡನವರ್

----------------------------------

ಬೀಜವ ಬಿತ್ತಿ ಸಸಿಯಾದೊಡೆ ಆರೈಕೆಗೈದು ಮೊಳಕೆಯೊಡೆದೊಡೆ ಬುಡಕೆ ಗೊಬ್ಬರವ ಸಾರಿಸಿದೊಡೆ ಜಲವನು ಸುತ್ತಲೂ ಕಟ್ಟಿಸಿದೊಡೆ ನೆಲದ ಬೇರ ಸುತ್ತಲೂ ಹಬ್ಬಿಸಿದೊಡೆ ರೆಂಬೆ ಕೊಂಬೆಯಾಗಿ ಚಿಗಿರಾದೋಡೆ ಹೂವು ಹಣ್ಣ ಕಾಯನು ಬಿಟ್ಟೋಡೆ ಹಸಿರನು ಉಸಿರಲಿ ಬೆರೆಸಿದಂತಾದೊಡೆ ಪ್ರಾಣಿ ಪಕ್ಷಿಗಳಿಗಾಸರೆಯಾದೊಡೆ ಮನುಕುಲಕೆ ಕಲ್ಪವೃಕ್ಷವಾಗಿಸಿದೊಡೆ ಬೀಡನು ಬಿಟ್ಟ ಗೂಡಿನಂತಾಗಿಸಿದೊಡೆ ನೆಲಕೆ ನೆರಳನು ಹಾಸಿಗೆಯಾಗಿಸಿದೊಡೆ ಹಸಿದವರಿಗನ್ನವ ವಾಗಿಸಿವಾಗಿಸಿದೊಡೆ ಮುಗಿಲೆತ್ತರಕೆ ಬೆಳೆದು ಬೆಳಕಾಗಿಸಿದೊಡೆ ಬೆಂದ ಬೆಂಕಿಗಾಹುತಿಯಾಗಿ ನಿನ್ಯಾರಿಗಾದೊಡೆ

----------------------------------

ನೋಂದಣಿ ಐಡಿ : KPFS2-9831

0
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top