ಸಮರ್ಪಿತ
ರಚನೆ : ವಿಶ್ವನಾಥ ಬಿ
----------------------------------
ಸೌಂದರ್ಯ ಹೊತ್ತಿಗೆಯಲಿ ಅವಳದೆ ಪರಿವಿಡಿ ಶೃಂಗಾರದ ರಸಕಾವ್ಯದಲಿ ಮಧುರ ಮುನ್ನುಡಿ ಭಾವನೆಗಳ ಬಿತ್ತಿದ ಚಹರೆಯೇ ದಂತಗನ್ನಡಿ ಲಾಲಿತ್ಯ ಲಲಿತಕಲೆಯ ಬಿಂಕ ದಿನವಿಡಿ ಕಿರುನಗೆಯ ಕಿನ್ನರಿ ನುಡಿಸುವುದೆ ದಿನಚರಿ ಅಲಂಕಾರಕೆ ಅಪರೂಪವೇ ನೀ ಸುಂದರಿ ಮಾತಿನ ಅಮೃತ ಸವಿ ಸುಧೆಯಲಿ ಕವೆಂಪುವಿನ ಮಲೆಗಳಲ್ಲಿ ಮದುಮಗಳು ನಿಮ್ಮಪ್ಪನಿಗೆ ನೀನೊಬ್ಬಳೆ ಮಗಳು ಸದಾ ನಿನ್ನ ಮೇಲೆಯೆ ನನ್ನಯ ನೆರಳು ಸುಂದರಿಯರ ಸಂತೆಯಲಿ ನೀನಷ್ಟೇ ಕಂಡವಳು ನನಗೆ ನೀ ನೀನಗೆ ನಾ ಎಂದಿಗೂ ಸಮರ್ಪಿತ.
----------------------------------
ನೋಂದಣಿ ಐಡಿ : KPFS2-9812