ಶ್ರಮದ ಸಹಿ
ರಚನೆ : ಯಶಸ್ವಿನಿ ಶ್ರೀಧರ ಮೂರ್ತಿ
----------------------------------
ಹೊಲದ ತುಂಬ ಅಪ್ಪನ ಶ್ರಮದ ಹೆಜ್ಜೆ ಗುರುತುಗಳು ದುಡಿಮೆ ನೊಗಕೆ ಹೆಗಲೊಡ್ಡಿದ ಜೀವ ಕನವರಿಕೆಗಳು ಬಾಳ ಪಯಣದ ಬದುವಲಿ ಬೆಳಕ ಬುತ್ತಿ ಹೊತ್ತ ಅವ್ವ ಕಷ್ಟದೊಲೆಯಲಿ ಬೆಂದು ಕಾವಳಕೆ ಸೆಡ್ಡು ಹೊಡೆದವ್ವ ಬಿಸಿಲ ಚಪ್ಪರದಡಿ ಬಸಿ ಬಸಿದ ಬೆವರ ಹನಿ ಹೊನಲು ಭುವಿಯೊಡಲ ಗರ್ಭದಿ ನವಿರು ಜೀವಕಣಕೆ ಉಸಿರು ತನಿಮೊಳಕೆ ಪಲ್ಲವಿಸಿ ಹಸಿರು ಹಂಬಿನ ಚಿತ್ರಮೊಹರು ಹಾಲ್ದೆನೆಯ ಪೈರ ಸಿರಿಯುಕ್ಕಿಸಿ ನಲಿವ ಸೀಮಂತಿನಿ ಕಡು ಬೇನೆಯುoಡು ನಗುವಿಗೆ ಜನ್ಮವೀವ ತಪಸ್ವಿನಿ ಎದೆಯಂಗಳದಿ ಹೊಳೆವ ಹೊನ್ನ ಪ್ರಭೆ ಭತ್ತದ ರಾಶಿ ಅಹಮಿಕೆಯ ಸಿಪ್ಪೆ ಕಳಚಿ ಮುಗುಳಕ್ಕಿಯ ಸೃಷ್ಟಿ ಜೀವ ಜಾಲದ ಮುಗಿಯದ ಹಸಿವ ನೀಗುವ ತ್ಯಾಗಿ ಜಗದ ಅನ್ನದ ಬಟ್ಟಲ ತುಂಬುವ ಕಾಯಕ ಯೋಗಿ ಶ್ರಮದ ಸಹಿಯಿತ್ತು ಲೋಕವ ಕಾವ ನಿತ್ಯ ನಿರ್ಮೋಹಿ
----------------------------------
ನೋಂದಣಿ ಐಡಿ : KPFS2-9809