Submission 6690

ನಾ ಎಷ್ಟೇ ಒದ್ದರೂನು!

ರಚನೆ : ಶ್ರೀನಿವಾಸ ದೇವಪ್ಪ ಮುದ್ಲಾಪುರ

----------------------------------

ಸಾಲು ಕರಳು ಬಳ್ಳಿಯಲ್ಲಿ, ರಕ್ತಧೊಳೆಯ ಸುಳಿಯಲ್ಲಿ, ನಿನ್ನ ಗರ್ಭದ ಗುಡಿಯಲ್ಲಿ, ಮಾಸಗಳನೇ ಕಳೆದೆನಲ್ಲಿ! ಕಾಣದೇನೆ ನನ್ನ ನೀನು, ಕಂಡೆ ನೂರು ಕನಸುಗಳನು ; ನಗು ನಗುತಲೇ ಇದ್ದೆ ನೀನು, ನಾ ಎಷ್ಟೇ ಒದ್ದರೂನು! ನೀ ನೋವನು ನುಂಗಿಕೊಂಡು, ನನ್ನ ನೀನು ಹೊತ್ತುಕೊಂಡು, ಮರೆಯಲ್ಲಿಯೇ ಅತ್ತುಕೊಂಡು, ಜನ್ಮ ಕೊಟ್ಟೆ ನೆಚ್ಚಿಕೊಂಡು! ನವ ಮಾಸದ ಕೊನೆಯವರೆಗೆ, ನನ್ನ ಭಾರ ಹೊತ್ತ ನಿನಗೆ ; ಈ ಜೀವನ ಮುಡಿಪು ನಿನಗೆ!

----------------------------------

ನೋಂದಣಿ ಐಡಿ : KPFS2-9799

0
Votes
75
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top