ಯಾರವನು?
ರಚನೆ : ಸವಿತಾ ರಾಣಿ ಜಿ ಆರ್
----------------------------------
ಸಂತೈಸುವಾಗ ಅಮ್ಮನ ಮಡಿಲು ಕಷ್ಟದಲ್ಲಿದ್ದಾಗ ಅಪ್ಪನ ಹೆಗಲು ಬಾಲ್ಯದಲ್ಲಿದ್ದಾಗ ಪ್ರತಿ ಮಾತಿಗೂ ನನ್ನದೇ ಸರಿ ಎಂಬ ಜವಾಬು ಆದರೆ ಈಗ ನಾನಿದ್ದೇನೆ ಎಂಬ ಭರವಸೆಯ ಬೆನ್ನೆಲುಬು ಸಂತಸ, ಬೇಸರ, ನಗು- ಅಳು, ವಾದ -ವಿವಾದ ಹೀಗೆ ಪ್ರತಿ ಹೆಜ್ಜೆಯಲ್ಲೂ ಜೊತೆ ನಿಂತವ ಅವನೇ ನನ್ನ ಪ್ರೀತಿಯ , ಸದಾ ನನ್ನ ಯಶಸ್ಸನ್ನೇ ಬಯಸುವ ಯಶಸ್ಸಿನಲ್ಲಿ ನನ್ನ ಪರಿಶ್ರಮ ಬಯಸದವ ಅವನೇ ಎಲ್ಲವನ್ನೂ ನಿಭಾಯಿಸುವ ಒಂದು ಬ್ರಹ್ಮಾಂಡ ಶಕ್ತಿ ಅವನೇ... ನನ್ನ ಅಣ್ಣ
----------------------------------
ನೋಂದಣಿ ಐಡಿ : KPFS2-9796