ನನ್ನವಳು
ರಚನೆ : ರಕ್ಷಿತ್ ಜಯಂತ್
----------------------------------
ಮಿಡಿಯುವ ಮನದಲಿ ಪದಗಳಪಾರ ಹೇಳದೆ ಹೋದರೆ ಹೃದಯಕೆ ಭಾರ ಕಾದಿಹೆ ಹೇಳಲು ಸಾವಿರ ಮಾತು ಕಾರಣ ಕೇಳದೆ ನೀ ಆಲಿಸು ಕೂತು. ಮಿನುಗುವ ತಾರೆಯ ಹೋಲುವ ಕಣ್ಣು ಕೋಗಿಲೆ ಕಂಠದ ಸುಂದರ ಹೆಣ್ಣು ಶಂಕದ ಕಿವಿಯಲಿ ಮುತ್ತಿನ ಓಲೆ ನನ್ನಯ ನಿದ್ದೆಯ ಕದ್ದಿರೋ ಬಾಲೆ. ಸರಳತೆಗೂ ಸರಳತೆಯ ಪರಿಚಯಿಸಿದವಳು ನನ್ನ ಎದೆಗೂ ತುಸು ಪ್ರೀತಿಯನು ತೋರಿದವಳು ಅರಳುತಿರೋ ಮಲ್ಲಿಗೆಯ ನಗುವನ್ನು ಚೆಲ್ಲಿ ಪೂರ್ಣ ಚಂದಿರನ ಕಾಂತಿಯನೂ ಸೋಲಿಸುವಳು.
----------------------------------
ನೋಂದಣಿ ಐಡಿ : KPFS2-9791