Submission 6660

ಬಾಲ ವಿಧವೆ

ರಚನೆ : ಉದಯಕುಮಾರ್ ಆಲ್ವಿ

----------------------------------

ಮಲಗು ಮಗುವೇ ಮತ್ತೆ ಏಳದಂತೆ ಮುಚ್ಚಿದ ಕಣ್ಣಂಚನು ಮತ್ತೆ ತೆರೆಯದಂತೆ ಬೆಳಗಾದರೆ ನಿನ್ನ ತಬ್ಬಿಬಿಡುವ ಹಸಿವ ಗುಮ್ಮ ಉದರಬಾಧೆಯ ತೀರಿಸಲಾರಳು ನಿನ್ನ ಅಮ್ಮ || ಹಿರಿಯರು ಮಾಡಿಸಿದ್ದ ಮದುವೆಗೆ ನಾನಾಗಿದ್ದೆ ಹರಕೆಯ ಕುರಿ ದಿಬ್ಬಣದಿ ನಡೆದಿತ್ತು ಬಾಲ್ಯವಿವಾಹವಂದು ನಟ್ಟ ನಡುರಾತ್ರಿ ಜೀವಜಾಲವ ಅರಿಯುವ ಮುನ್ನವೇ ವಿಧವೆಯಾಗಿಸಿರೆ ಅಳಿದ ಆಕೃತಿ || ಲೋಕದಕಣ್ಣಿಗೆ ವಿಧವೆ, ನನ್ನೊಳಿಹನು ಇನಿಯ ಇನ್ನೂ ಮಗುವ ನಗುವಿನಲಿ ಬಾಳಹಾದಿ ಸವೆಸಲು ಬಿಡಲಾರಾದೀ ಕಾಮುಕರ ಕಣ್ಣು ಪ್ರಶ್ನಿಸಲಾಗದೆ ದುಃಖಿಸುತ್ತಿರುವ ನಾನು ಅಬಲೆ ಹೆಣ್ಣು || ಬಾ ಮಗುವೇ ಚಿರವಿಶ್ರಾಂತಿಗೆ ತೆರಳೋಣ ಕಾದಿದೆ ನಮಗೆ ಊರಾಚೆಗಿನ ಬಯಲು ಸ್ಮಶಾನ ಅಲ್ಲಿಲ್ಲ ಹಸಿವು ದಾಹಗಳ ಬಾಧೆ ನಿರಾಶೆಗಳ ಔತಣ ಕ್ಷಮಿಸಿಬಿಡು ಕಂದ ನಾನೊಬ್ಬ ನಿರ್ದಯಿ ಅಮ್ಮ ||

----------------------------------

ನೋಂದಣಿ ಐಡಿ : KPFS2-9768

0
Votes
72
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top