Submission 6654

ಗುಟ್ಟು

ರಚನೆ : ಈಶ್ವರಚಂದ್ರ ಎಸ್ ಹೆಗ್ಡೆ

----------------------------------

ಇರುವ ಮಿತಿಯಲ್ಲಿ ಅನುಭವಿಸು ಜಗವಾ ಅತಿ ಆಸೆ ಮನೆ ಮಾಡೆ ನೀ ಸಹಿಸು ನೋವಾ ನಶ್ವರದ ಭ್ರಾಂತಿಯೊಳು ಮರುಗದಿರು ಕುಗ್ಗದಿರು ಹದವರಿತು ಹೋರಾಡು ಸಂಯಮಿಸು ಸೋಲದಿರು ಮನಸ್ಸೆಂಬ ಕುದುರೆಗೆ ಇರಲಣ್ಣ ಬಿಗಿಹಿಡಿತ ಮಿತಿಮೀರಿ ಓಡಿದರೆ ನಿಲ್ಲಬಹುದು ಎದೆಬಡಿತ ಏಳು ಬಣ್ಣದ ಬೆಳಕು ಚೆಂದ ಕಾಮನಬಿಲ್ಲು ಏಳುಬೀಳಿನ ಬದುಕು ಎದೆಸೆಟೆದು ನಿಲ್ಲು ಹುಟ್ಟಲ್ಲಿ ಗುಟ್ಟಿಹುದು ಬಯಸಿದರೆ ಬಾರದು ಸಾವಲ್ಲಿ ಏನಿಹುದೊ ಕೊನೆವರೆಗೂ ಕಾಡುವುದು ಸಾಮರಸ್ಯದ ಸಿಹಿಯ ಸವಿಯೋಣ ಸೇರಿ ಸಂಭ್ರಮಿಸು ಸಂಸಾರ ಹೊಸ ಎತ್ತರವ ಏರಿ

----------------------------------

ನೋಂದಣಿ ಐಡಿ : KPFS2-9765

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top