ಕನ್ನಡ ನಾಡ ನೋಡು!
ರಚನೆ : ಛವಿ ಮೋಹನ್
----------------------------------
ಇಲ್ಲಿರುವುದು ನಮ್ಮ ನಾಡು, ಕನ್ನಡ ನಾಡು, ಕವಿಗರ ಸಿರಿನಾಡು, ಕನ್ನಡವೇ ಈ ನಾಡಿನ ಭಾಷೆ ನೋಡು! ಇಲ್ಲಿರುವ ಐತಿಹಾಸಿಕ ಸ್ಥಳಗಳ ನೋಡು, ಹಂಪಿ, ಬಾದಾಮಿ ಮತ್ತು ಪಟ್ಟದಕಲ್, ಇಲ್ಲಿರುವ ಮೈಸೂರು ದಸರದ ವೈವಿಧ್ಯತೆಯ ನೋಡು! ಇಲ್ಲಿ ಹರಿಯುವ ಇಂಪಾದ ಸಂಗೀತವ ಕೇಳು, ಇಲ್ಲಿ ನಡೆಯುವ ಯಕ್ಷಗಾನ ನೃತ್ಯವ ನೋಡು, ಇಷ್ಟೇ ಮಾತ್ರವಲ್ಲ- ರಂಗಭೂಮಿಯಲ್ಲಿರುವ ಶ್ರೀಮಂತಿಕೆಯ ನೋಡು! ಹಚ್ಚಹಸಿರು ಹೊದ್ದಿರುವ ಈ ನಾಡನು ನೋಡು ಮಂಜು ಮುಸುಕಿದ ಸಹ್ಯಾದ್ರಿ ಪರ್ವತವ ನೋಡು, ಇದರೊಂದಿಗೆ ಜೋಗ ಜಲಪಾತ - ಇವುಗಳೆಲ್ಲಾ ಕರುನಾಡಿನಲ್ಲಿವೆ ನೋಡು! ಇದು ನಮ್ಮ ಕನ್ನಡ ನಾಡು!
----------------------------------
ನೋಂದಣಿ ಐಡಿ : KPFS2-9726