ನನ್ನವನು
ರಚನೆ : ರೂಪ ಟಿ ಎನ್
----------------------------------
ಸಂಜೆ ಕೆಂಪಾದ ಬಾನಲ್ಲಿ. ತಣ್ಣನೇ ಬೀಸುವ ಗಾಳಿಯಲ್ಲಿ. ನನಗಾಗಿ ಬಂದವ ನನ್ನವನು..!! ನನ್ನ ಉಸಿರಲ್ಲಿ ಉಸಿರಾಗಿ. ಕೊರಳಿಗೆ ಮಾಲೆಯಾಗಿ. ಬಾನಿಂದ ಇಳಿದು ಬಂದವನು ನನ್ನವನು..!! ಏನೆಂದು ವರ್ಣಿಸಲಿ ಅವನ ಪ್ರೀತಿಯ. ಅವನಿಲ್ಲದ ರೀತಿಯ. ಪರಿಪರಿಯಾಗಿ ಹೇಳಲೇ ಪ್ರೀತಿ ಮಾಡುವ ರೀತಿಯ ಅವನು ನನ್ನವನು..ಕಣ್ಮರೆಯಾದವನು..!! ಬಾನೆನ್ನಲೆ ಭುವಿ ಎನ್ನಲೇ. ಆಕಾಶದೆತ್ತರ ಅವನ ಪ್ರೀತಿ ಎನ್ನಲೇ. ವರ್ಣಿಸಲು ಪದಗಳಿಲ್ಲದವನು ನನ್ನವನು..!! ಹೇಗೆ ಹೇಳಲಿ ನನ್ನ ಪ್ರೀತಿಯನ್ನು ಅವನು ಎಂದು ನನ್ನವನು ನನಗಾಗಿ ಮಿಡಿದವನು...!! ಮರೆತು ಮರೆಯಾದವನು.. ಅವನೇ ನನ್ನವನು..!! ಇಂತಿ ನಿನ್ನವಳು
----------------------------------
ನೋಂದಣಿ ಐಡಿ : KPFS2-9723