ಅವಳು ಮತ್ತು ನೆರಳು
ರಚನೆ : ಬಿ ಸಿ ನಂದಿನಿ
----------------------------------
ಹೇ ಪ್ರೀತಿ, ನನ್ನದೊಂದು ವಿನಂತಿ, ಕಲಿಸಿಕೊಡು ಗೆಳತಿ, ನಿನ್ನ ಮರೆವ ರೀತಿ. ನರಳಿದ ನೆರಳು ನನ್ನ ಹಿಂದೆ ಬಂದರೆ, ಕದಡಿದ ಬಾಳು ಬಣ್ಣ ಕಳೆದು ಕೊಂಡರೆ, ಅಯ್ಯೋ ಅನ್ನದ ಈ ಬೀದಿ ದೀಪ, ನೆರಳ ಒರೆಸಿ ನಿರಾಳಿಸಲಾರ ಪಾಪ, ಕಂಗಾಲಿನ ತಂಗಾಳಿ ಅಪ್ಪುಗೆಯ ನೆನಪು, ಮುಂಗಾರಿನ ಮಳೆಯಲಿ ಬಿಸಿ ಉಸಿರ ಕಂಪು, ಎಂದು ಮರೆಸದು ಈ ಹೊಂಗೆ ಮರವು, ನಿನ್ನ ಬೀಳ್ಕೊಡುಗೆಯು ನಾ ಬೇಡದ ವರವು. ಲಜ್ಜೆಯ ಹೆಜ್ಜೆ ಗುರುತು ಇನ್ನು ಮಾಸಿಲ್ಲ, ಗೆಜ್ಜೆಯ ಸಪ್ಪಳ ಈ ರಸ್ತೆ ಮರೆತಿಲ್ಲ, ನಿನ್ನ ಮೊದಲ ಸ್ಪರ್ಶಕೆ ಸಾಕ್ಷಿ ಆ ಚಂದಿರ, ನನ್ನ ಮೊದಲ ಪ್ರೀತಿಗೆ ಉಳಿದದ್ದೆ ಕಣ್ಣೀರ.
----------------------------------
ನೋಂದಣಿ ಐಡಿ : KPFS2-9713