Submission 6550

ಜೀವದಾತ ರೈತ

ರಚನೆ : ಶಂಕರ್ ನಾಗ್ ಜಿ. ಪಿ

----------------------------------

ಕತ್ತಲನ್ನು ಈಜಿ ಸೂರ್ಯ ರಶ್ಮಿ ಮೂಡುವ ಮುನ್ನ ಮುಂಜಾನೆ ಕೋಳಿಯ ಸೊಲ್ಲಡಗುವ ಆ ಕ್ಷಣ ಹಸಿ ಮಣ್ಣ ಸೀಳಿ ಮೊಳಕೆಯೊಂದು ಎದ್ದಂತೆ ಏಳುವನು ನೋಡ ಹೊಸ ಜೀವದಾತ ರೈತ ಬಸವ ಪಾದಕ್ಕೆ ತಲೆಬಾಗಿ ಮುಡಿಯಿಟ್ಟು ದರೆ ಉಳುವನು ನೇಗಿಲ ಹೆಗಲಿಗೆ ಕೊಟ್ಟು ಲೋಕದ ಹಂಗು ತೊರೆದು ಹೊರಟ ಯೋಗಿ ಹಸಿರು ಬೆಳೆದು ಉಸಿರನಿಟ್ಟ ಮಹಾತ್ಯಾಗಿ ನಡುದಿನದ ಸೂರ್ಯಪ್ಪನ ಕೋಪವು ಸಹಿಸಿ ನೆತ್ತಿಯ ಹನಿಯನ್ನು ಭೂತಾಯಿಗೆ ತಾಕಿಸಿ ಛಲಬಿಡದೆ ದುಡಿದು ಬದುಕುವನು ಸಾಗಿ ಎಲ್ಲರ ಹೊಟ್ಟೆಯ ತುಂಬಿಸುವ ಬೈರಾಗಿ ಕತ್ತಲಲ್ಲಿ ಬೆಳಕು ಮುಳುಗುವ ಹೊತ್ತಲ್ಲಿ ಮನೆದಾರಿ ಹಿಡಿವನು ಭಾರದ ಮೈಯಲ್ಲಿ

----------------------------------

ನೋಂದಣಿ ಐಡಿ : KPFS2-9683

0
Votes
91
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top