ಅಳು ನುಂಗಿ ನಗಬೇಕು
ರಚನೆ : ಸುಶೀಲಾ ಎಸ್ ಅಮೀನ್
----------------------------------
ಹೃದಯದ ಗೂಡಲ್ಲಿ ಉಲಿದು ನಲಿದ ಕರುಳ ಕುಡಿ ಎದೆ ಹಾಲ ಋಣವ ಮರೆತು ಪುರ್ರೆಂದು ಹಾರಿ ಹೋಯಿತು ಹಳೆ ನೆನಪುಗಳ ದಿಕ್ಕರಿಸಿ, ಹೊಸ ಸಂಬಂಧವ ಬೆಂಬಲಿಸಿ ಮಮತೆಯ ತೋರದೆ, ನೆರಳಾಗಿ ಬೆಂಬಲಿಸದೆ ನೋವುಂಡ ಬದುಕಿಗೆ ಕರುಣೆಯ ಆಸರೆ ನೀಡದೆ ಪ್ರೀತಿ ವಿಶ್ವಾಸದಿ ಹೆಣೆದ ಗೂಡಲ್ಲಿಂದು ಬರೀ ಕತ್ತಲು ಅಪಮಾನವ ಅಗಿದು ನುಂಗಿದ ಹತಾಶೆಯ ಖಾಲಿ ಗೂಡಿಗೆ ಮತ್ತೆ ಹೊಸ ಕನಸುಗಳ ರಂಗು ಬಳಿಯಲಿದೆ ಬದುಕ ಸಂಘರ್ಷದಲಿ ಮರೆತುಬಿಟ್ಟ ಆಸೆ ಆಕಾಂಕ್ಷೆಗಳಿಗೆ ಹೊಸ ಹುರುಪಿನ, ವಿಶ್ವಾಸದ ರೆಕ್ಕೆ ಮತ್ತೆ ಕಟ್ಟಲಿದೆ ಎಲ್ಲವನ್ನೂ ಮನ್ನಿಸಿ ಎಲ್ಲರನ್ನೂ ಪ್ರೀತಿಸುವ ಕೋಪ-ತಾಪ, ಮದ ಮತ್ಸರವಿಲ್ಲದ ಅಲೌಕಿಕ ಬದುಕಿನತ್ತ ಪಯಣಿಸುವಾಸೆ ಮರೆತುಬಿಟ್ಟ ಹವ್ಯಾಸಗಳಿಗೆ ಮತ್ತೆ ಚಾಲನೆ ಕೊಡುವಾಸೆ ಅಳು ನುಂಗಿ ನಗುವಾಸೆ .... ಖಾಲಿ ಗೂಡ ಮತ್ತೆ ತುಂಬುವಾಸೆ
----------------------------------
ನೋಂದಣಿ ಐಡಿ : KPFS2-9634