ನಾ ಕಂಡ ಅವಳು
ರಚನೆ : ಡಾ. ಪವಿತ್ರ . ಜಿ
----------------------------------
ಇರುಳಿನ ಬಾನಿನಷ್ಟೆ ತಂಪು ಅವಳ ನಯನ ಸ್ಥಿರ ಸಲಿಲದಲ್ಲಿ ಅರಳಿದ ತಾವರೆ ಅವಳ ವದನ ಸುಂಕವಿಲ್ಲದ ಹಣೆಯ ಮೇಲೆ ಕೆಂಪು ತಾರೆ ಜೋತು ಬಿದ್ದ ಜುಮುಕಿಗೆ ಮಾಂಗಲ್ಯದ ಸೆರೆ. ಅವನ ಮನೆಯ ಬೆಳಗಿದಳು ದೀವಿಗೆಯಾಗಿ ಅರ್ಧಾಂಗಿಯಾಗಿ ಎಲ್ಲವ ಕ್ಷಮಿಸಿ ಜೊತೆ ನಡೆದಳು. ಅಂದು ಪತಂಗದಂತೆ ಹಾರಿ , ಇಂದು ಸಹನೆಯ ಸಲಹಿಯಾಗಿಹಳು. ಅಮಲಿಗೆ ತಲೆದೂಗಿಸಿ ಅವನ ಎದೆಬಡಿತ ನಿಶ್ಯಬ್ದವಾಯಿತು. ಕುಗ್ಗಿದ ಮನಕೆ ಕಂಬನಿ ಮಿಡಿದ ನಯನ ಸಾಕ್ಷಿಯಾಯಿತು. ಅಂತರಂಗದ ಕಲಹಕ್ಕೆ ನಾಳೆಯಂಬ ಖಾಲಿ ಹಾಳೆ ಕೈ ಹಿಡಿದವಳು ನಿಂದಿಸಿ ಕೂಗಿ ಕುಗ್ಗುವರ ನಡುವೆ , ಕೂಸ ನೆನೆದು ದೃತಿಗೆಡದ ತಾಯಿಯವಳು.
----------------------------------
ನೋಂದಣಿ ಐಡಿ : KPFS2-9628