Submission 6456

ಮಳೆಗೊಂದು ಮನವಿ

ರಚನೆ : ಅಕ್ಷತಾ ಎಂ ಎಸ್

----------------------------------

ಹೇ ಮಳೆಯೇ ನಗಿಸು ನನ್ನನ್ನು, ಕುಣಿಸು ನನ್ನನ್ನು ಜಗದ ಅರಿವೇ ಇರದ ಹಾಗೆ ಹೇ ಮಳೆಯೇ ನೆನೆಸು ನನ್ನನ್ನು, ತಣಿಸು ಇನಿನ್ನು ಎಲ್ಲ ಬೇಸರ ಅಳಿಸಿ ಹೋಗುವ ಹಾಗೆ.... ಕಿಟಕಿಯಿಂದ ಎರಚಿ ತೋರಿದ ನಿನ್ನ ಪ್ರೀತಿಗೆ ಮನ ಮಗುವಾಗಿದೆ.... ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಿ ನಿನ್ನೊಡನೆ ಬೆರೆಯುವ ಆಸೆಯಾಗಿದೆ.... ಹೇ ಮಳೆಯೇ ನಿನ್ನ ತುಂತುರು ಹನಿಯ ಸಾಂಗತ್ಯ ಹೃದಯಕ್ಕೆ ಹಿತವೆನಿಸಿದೆ.... ನಿನ್ನ ಪ್ರತಿ ಚರ್ಯೆಯು ನನ್ನೀ ಚಂಚಲ ಮನಕ್ಕೆ ಮುದ ನೀಡಿದೆ... ಅದೆಂತಹ ಶಿಲೆಯು ಸೋಲಬೇಕಿದೆ ನಿನ್ನ ಪ್ರೀತಿಗೆ, ಆ ಪ್ರೀತಿಯ ರೀತಿಗೆ!

----------------------------------

ನೋಂದಣಿ ಐಡಿ : KPFS2-9615

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top