ಅಳಲು
ರಚನೆ : ಸುಧಾಮಣಿ ಟಿ.ಸಿ
----------------------------------
ನೆನಪುಗಳ ಬಾನಂಗಳದಿ ಸವಿಯಾದ ನವಿರಾದ ಈ ಜೀವನದ ಹಾದೀಲಿ ಬರಬಾರದಿತ್ತೇ ನೀ ತಂಪನ್ನೆರೆಯುವ ತಂಗಾಳಿಯಂತೆ. ಕಂಡ ಕನಸು ಸಾವಿರಾರು ಕೈಗೆ ಎಟುಕಿದ್ದು ಎರಡೋ ಮೂರು. ಮೋಸದ ಹಾದಿಯಲಿ ಜಾರಿ ಬಿದ್ದದ್ದೆಷ್ಟೋ ಕಾಲುಗಳನ್ನು ಮುರಿದುಕೊಂಡಿದ್ದೆಷ್ಟೋ ಈಗ ಉಳಿದಿರುವುದು ಜೀವಂತ ಶರೀರ ಮಾತ್ರ. ಕಣ್ಣುಗಳಲ್ಲಿ ಹೊಳಪಿಲ್ಲ, ತಲೆಯಲ್ಲಿ ಕೂದಲಿಲ್ಲ ನಕ್ಕರೂ ಅದು ಮನದಾಳದ ನೆಮ್ಮದಿಯಿಂದಲ್ಲ ನಿರಾಶೆಯೇ ಕಾರ್ಮೋಡವಾಗಿ ಅಮವಾಸ್ಯೆಯ ಕತ್ತಲು ಕವಿದಿರುವಾಗ ಬರಬಾರದಿತ್ತೆ ನೀನು ಆಶಾಕಿರಣವಾಗಿ.
----------------------------------
ನೋಂದಣಿ ಐಡಿ : KPFS2-9613