ಕಡಲ ದನಿ
ರಚನೆ : ಬಸವರಾಜ ಕರುವಿನ
----------------------------------
ಅಗಾಧವಾದ ಶಕ್ತಿ ತುಂಬಿಕೊಂಡ ಸಾಗರ ನಿತ್ಯವೂ ಏಳು ಬೀಳು ಕಾಣುವ ಅಲೆಗಳ ಜಾಗರ ಎಷ್ಟೇ ನೋವು ಬಿದ್ದರು ತಾಳಿಕೊಳ್ಳುವ ತೀರ ಎಲ್ಲವನ್ನು ಅವಿತಿಟ್ಟುಕೊಂಡು ನಿರ್ಮಲತೆ ತಾಳಿದೆ ಮುನ್ನಿರು ಆಕಾಶದ ನೀಲಿ ಜಾರಿದೆ ಶರಧಿಗೆ ಮುದಮನದಿಂದ ಭಾವಗಳು ಚಿಮ್ಮಿವೆ ಪರಿಧಿಗೆ ಮೇಘಕ್ಕೂ ಮುಗಿಲಿಗೂ ಒಲವಿನ ಸಂಭ್ರಮ ಶರಧಿಯ ಜೋಗಳ ನೋಡುವುದೇ ವಿಹಂಗಮ ಮನದಾಳದಲ್ಲಿ ಪ್ರೀತಿ ಮಮತೆಯ ಕವಲು ಶರಧಿಯ ಒಡಲಲ್ಲಿ ಮೇಳೈಸಿದ ತಿಳಿನೀಲ ಮುಗಿಲು ಭಾವಕ್ಕೂ ಬಂಧಕ್ಕೂ ಅಲ್ಲಿಲ್ಲ ಮೇರೆ ಸಂತಸದ ಅಲೆಗಳಿಗೆ ಕೊಚ್ಚಿ ಹೋಗಿದೆ ನೋವಿನ ಸೂರೆ
----------------------------------
ನೋಂದಣಿ ಐಡಿ : KPFS2-9565