ಮೌನದ ಬೀಜ
ರಚನೆ : ದಿಲೀಪ ಹೊನ್ನವಳ್ಳಿ
----------------------------------
ಎಲ್ಲರೊಳಗಿಹುದು ಮೌನದ ಬೀಜ, ಮೊಳೆಯಲು ಮನದಲ್ಲಿ ಬೇಕು ಜಾಗ; ಕ್ಷಣಿಕ-ಕ್ಷುಲ್ಲಕದ ಕಳೆ ಕಿತ್ತಾಗ, ನೀರಿನ ಹನಿಗಳು ಬಿದ್ದು ಎಚ್ಚರ. ಮೌನ ಹರಡಿ, ಅದು ಅರಿವಿನ ಅರಳಿ, ಬಾಳಿನುದ್ದಕ್ಕೆ ನೆರಳಿನ ಹಾದಿ; ಸಾಗರದ ನಡುವೆ ದ್ವೀಪವು ಮೌನ, ಮರುಭೂಮಿಯಲ್ಲಿ ಕೂಪ ಸಮಾನ. ಮೌನ ಅಡಗಿದೆ ಸುಪ್ತ ಸುತ್ತಲೂ, ಆಲಿಸಲು ಕಿವಿ ಸೂಕ್ಷ್ಮವಿರಬೇಕು; ಮನದ ತುಂಬ ಮೌನ ತುಂಬಿದಾಗ, ತುಳುಕುವುದಿಲ್ಲ, ಇನ್ನದು ನಿರಾಳ.
----------------------------------
ನೋಂದಣಿ ಐಡಿ : KPFS2-9558