Submission 6376

ಹೊಸಬಾಳು

ರಚನೆ : ಸುಗಮ ಡಿ ಪಾಟೀಲ್

----------------------------------

ಕಟ್ಟಿಕೊಳ್ಳಬೇಕು ನೂರಾರು ಕನಸು ಜೀವನದಲ್ಲಿ ಕಷ್ಟ ಸುಖವು ಸಮವೆಂದು ತಿಳಿದು ಬಾಳಬೇಕಿಲ್ಲಿ ಪ್ರೀತಿ ಹಂಚುತಲೇ ಪ್ರೀತಿಯನು ಪಡೆಯಬೇಕಿಲ್ಲಿ ಭರವಸೆಯಿಂದ ನಗುತಲಿ ನಾವು ಸಾಧಿಸಬೇಕಿಲ್ಲಿ ಹೂವಿನಂಥ ನಿರ್ಮಲ ಮನಸ್ಸಿರಬೇಕು ಬದುಕಲ್ಲಿ ದ್ವೇಷವ ಮಾಡುತಲಿ ಕಳೆಯಬಾರದು ಕಾಲವನ್ನಿಲ್ಲಿ ನೋವು ನಲಿವು ಎಲ್ಲವೂ ಅವನ ಕಾಣಿಕೆಯಿಲ್ಲಿ ನಾನೆಂಬ ಅಹಂಕಾರದಿ ಮನುಜ ಮೆರೆಯಬಾರದಿಲ್ಲಿ ಒಳಿತು ಮಾಡಿದರೆ ಒಳಿತೆ ಆಗುವುದು ನಿಜವಿಲ್ಲಿ ಕೆಡುಕಿನ ಬೆನ್ನ ಹತ್ತಿದರೆ ಕೆಡುಕೆ ಉಳಿಯುವದಿಲ್ಲಿ ನಿಶ್ಚಲ ಹೃದಯದಿಂದ ಗುರಿಯತ್ತ ಸಾಗೋಣವಿಲ್ಲಿ ಹೊಸತು ಬಾಳಿಗೆ ಸ್ಫೂರ್ತಿಯಾಗೋಣ ನಾವಿಲ್ಲಿ

----------------------------------

ನೋಂದಣಿ ಐಡಿ : KPFS2-9551

0
Votes
99
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top