Submission 6342

ಹಬ್ಬ-ಹರಿದಿನ

ರಚನೆ : ಪುಷ್ಪ ದುಡ್ಡನಹಳ್ಳಿ

----------------------------------

ಎಲ್ಲಿ ಹೋಯಿತು ಹಬ್ಬ ಹರಿದಿನಗಳ ಸೊಬಗು | ನೀತಿ ನೇಮಗಳ ಆಧ್ಯಾತ್ಮದ ಬೆರಗು || ಉಪವಾಸವೆಂದು ಸಿಕ್ಕಿದ್ದೆಲ್ಲಾ ತಿಂದು, ಹತ್ತು ದೇವಾಲಯ ಸುತ್ತಿದರೂ ಜೇವಕ್ಕಿಲ್ಲ ತೃಪ್ತಿ | ಅಜ್ಜಿ ಕೈಯ ತಂಬಿಟ್ಟು ತಿಂದು, ಅಯ್ಯನೋರು ಹಣೆಗೆ ಹಚ್ಚುತ್ತಿದ್ದ ವಿಭೂತಿಯಲ್ಲಿತ್ತು ಶಿವರಾತ್ರಿಯ ಭಕುತಿ ॥ ಬಯಸಿದ್ದೆಲ್ಲಾ ಪಡೆಯುವ ಅನುಕೂಲವಿದ್ದರೂ ಮನಸಿಗಿಲ್ಲ ಉಲ್ಲಾಸ | ಅಪ್ಪಕೊಡಿಸಿದ್ದ ಹೊಸ ಬಟ್ಟೆ ಧರಿಸಿ ತಮ್ಮನ ಕೈ ಹಿಡಿದು ಊರೆಲ್ಲಾ ಸುತ್ತಿ ಬಂದ ನೆನಪಲ್ಲೇ ಉಗಾದಿಯ ಸಂತಸ || ತರಾವರಿ ತಿಂಡಿ ತಿನಿಸು,ಬೂಂದಿ, ಲಾಡು,ಬಟ್ಟೆಬರೆ ಆಡಂಬರದ ಗಿಲೀಟು | ಸೊಗಸಾಗಿತ್ತು ಮಾರನೋಮಿಗೆ ಅಮ್ಮ ಕೈಯಾರೆ ಹೊಲಿದು ನನಗೂ ತಂಗಿಗೂ ತೊಡಿಸುತ್ತಿದ್ದ ಒಂದೇ ತಾನಿನ ಲಂಗ ಜಾಗೀಟು ||

----------------------------------

ನೋಂದಣಿ ಐಡಿ : KPFS2-9523

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top