Submission 6326

ಕಣ್ಣ ಕನ್ನಡಿ -ಕನ್ನಡ

ರಚನೆ : ನಾರಾಯಣ ಸ್ವಾಮಿ ಪಿ ಟಿ

----------------------------------

ಕೆಚ್ಚೆದೆಯ ಕನ್ನಡಿಗನೆ ನೆಚ್ಚದಿರು ಅನ್ಯರನು ಮೆಚ್ಚುತಲೆ ಬಂದು ಕೊಚ್ಚಿಹರು ಜನ್ಯರನು ಬೆಣ್ಣೆಯಂತೆ ಮಾತಾಡಿ ಬಣ್ಣವನೆ ಕೆಡಿಸಿಹರು ಕನ್ನಡಿಯೆ ಕನ್ನಡವು ಕೆಡುಕಲೆಳಿಸಿಹರು! ಗಡಿನಾಡ ಗಂಧಗುಡಿಯ ಗೋಳು ಕೇಳುವವರಾರು ಕರುನಾಡ ಹೃದಯದಾಳದಿ ನಿಂತು ಮೆರೆಯುತಿಹಾರಾರು ಸನ್ನಿ ರಾಜಕೀಯದ ಮುಂದೆ ಸೊರಗುತಿದೆ ಎನ್ನುಸಿರು ಬರಿದಾಯಿತೆ ತಾಯಿ ಕನ್ನಡಾಂಬೆಯ ಬಸಿರು ಕಾಲ ಮಿಂಚುವ ಮೊದಲು ಸಂಚು ಹೂಡುವ ಮೊದಲು ವಿಶ್ವ ಭೂಪಟದಿ ನಿನ್ನೆಸರ ಅಳಿಸುವ ಮೊದಲು ನವ ಪೀಳಿಗೆಗೆ ಕಲಿಸು ಕನ್ನಡದ ತೊದಲು ನೀನಾಗು ಧರೆಯ ಭಾಷೆಗೆ ಮೊದಲು ಸಾವಿರದ ದ್ರಾವಿಡರ ಹಿರಿಮಗಳು ನನ್ನಮ್ಮ ಮರೆಯದಿರು ಮರೆಯದಿರು ನೀ ಕನ್ನಡದ ಕಂದಮ್ಮ.

----------------------------------

ನೋಂದಣಿ ಐಡಿ : KPFS2-9511

0
Votes
116
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top