ತುಳಿದ ಕಡೆ ಹೊಳೆದು ನಡೆ
ರಚನೆ : ಸಂಧ್ಯಾ ಗಿರಿಶ್ರೀ
----------------------------------
ಕಳೆದಲ್ಲಿಯೇ ಹುಡುಕಬೇಕು ಬಿದ್ದಲ್ಲಿಯೇ ಎದ್ದು ನಿಲ್ಲಬೇಕು ಎಲುಬಿಲ್ಲದ ನಾಲಿಗೆಗೆ ಕಿವಿಗೊಡದಿರು ಗುರಿಯತ್ತ ಮಾತ್ರವೇ ಗಮನಕೊಡು ಆಡಿಕೊಳ್ಳುವುದೇ ಬಿಡು ಜನರ ಕೆಲಸ ಹಾಡಿ ಹೊಗಳುವರು ನೀನಾಗಲು ಅರಸ ನಿಂದಕರೇ ಕಾಣೋ ಸಾಧಕರ ಶಕ್ತಿ ಕೇಳಿಲ್ಲವೇ ನೀನು ನಮ್ಮ ದಾಸರ ಉಕ್ತಿ ವಿಶ್ವಾಸವ ಕುಗ್ಗಿಸುವ ತಂತ್ರಕ್ಕೆ ಬಲಿಯಾಗಬೇಡ ಆತ್ಮರಕ್ಷಕನಾಗಿ ಸ್ವತಃ ದೇವನಿರುವ ಮರೆಯಬೇಡ ಅವನೇ ರಚಿಸಿ ನಿರ್ದೇಶಿಸಿದ ಕಥೆಯೇ ಬದುಕು ನರನಲ್ಲೋ ಶ್ರೀ ನರಹರಿಯ ನಂಬಿ ನಡೆ ಸಾಕು ಸಾಧಿಸುವ ಹಾದಿಯಲ್ಲಿ ಎಡರು ತೊಡರು ಸಹಜ ಛಲದಿಂದ ಈಸಬೇಕು ಇದ್ದು ಜೈಸಬೇಕೋ ಮನುಜ ಹೆಜ್ಜೆ ಗುರುತು ಮೂಡುವಂತೆ ತುಳಿದ ಕಡೆ ಹೊಳೆದು ನಡೆ ಅಂಜದೆ ಅಳುಕದೆ ಹಿಡಿದು ಹೊರಡು ಸ್ವಾಭಿಮಾನದ ಕೊಡೆ
----------------------------------
ನೋಂದಣಿ ಐಡಿ : KPFS2-9505