Submission 6302

ನನ್ನ ನಕ್ಷತ್ರ

ರಚನೆ : ಶಿವಯೋಗಿ ಕಳ್ಳಿಮಠ

----------------------------------

ನನ್ನ ಮಗಳ ಕೇಕೆಯ ಇಂಪಿದೆ ನನ್ನ ಗುಡಿಸಲಲಿ. ಯಾರು ಕದ್ದಾರು ನನ್ನ ಬೆಳದಿಂಗಳನು.. ನನ್ನೆದೆಯ ಮೇಲೆ ಅವಳ ಮಣ್ಣಂಟಿದ ಪಾದಗಳ ಕುಣಿತದ ಘಮವಿದೆ. ಇಷ್ಟು ಸಾಕು ನನಗೆ ಜಗದ ಸಂಪತ್ತು ಅಣಕಿಸಲು. ಅವಳ ತೊದಲು ನುಡಿಯಲ್ಲಿ ನನ್ನ ಭಾವುಕ ಜಲಪಾತವಿದೆ. ನಾನು ಮತ್ತೆ‌ ಮತ್ತೆ ಮಗುವಾಗಲು. ಅವಳ ಗಂಜಿ ಮೆತ್ತಿದ ಬಾಯಿಯ ಸುತ್ತ ನನಗೆಂದೇ ಬಾಗಿದ ಮುಗಿಲಿದೆ. ನನ್ನದೆ ನಕ್ಷತ್ರಗಳ ಅಂಟಿಸಲು. ಅವಳ ನಗುವಿನಲ್ಲಿ ಅನಾಮಿಕ ಕವಿಯ ಸೊಲ್ಲಿದೆ. ನಾನು ಸುಖಿಸುತ್ತ ಸವೆಯಲು.

----------------------------------

ನೋಂದಣಿ ಐಡಿ : KPFS2-9488

0
Votes
73
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top