ನನ್ನವನು
ರಚನೆ : ಆವಿಕ್ ಬ ಗೊಂಡಿಮನೆ
----------------------------------
ಮುಸ್ಸಂಜೆ,ಮುಂಜಾವು, ಬಿರುಬಿಸಿಲು, ಚಳಿಗಾಳಿ. ಸಿಹಿಮನಸು,ಕಹಿಮಾತು, ಎಲ್ಲವೂ ಇರಲಿ ನಿನ್ನೊಂದಿಗೆ. ಸಮಯವ ನೀಡಿ ಕೂಡಿಡು ನನಗಾಗಿ ನನ್ನೊಲವೆ ಮತ್ತೆ ಸಂಜೆಯಲ್ಲಿ ಬಿಸಿ ಕಪ್ಪಿನಲ್ಲಿ ಒಂದಾಗೋಣ ಒಂದಿಷ್ಟು ಮಾತಿನಲಿ. ಮೌನವಾಗಿ ಮಾತನಾಡು ಕಣ್ಣರಳಿಸಿ ನೋಡುವೆ ನಿನ್ನ. ಹಳೆ ಕಥನವ ಹೇಳು ಮೈ ಮನವ ತೆಗೆದಿಡುವೆ ಇನ್ನಾ. ಹೇಳದೆ ಉಳಿದ ಕತೆಗಳ ಕೇಳುವಾಸೆ ಓ ಗೆಳೆಯ ಮತೊಮ್ಮೆ ಕೇಳುವಾಸೆ ತಿಳಿಸುವೆಯಾ ನಿನ್ನ ಗಮ್ಯಸ್ಥಾನವ ನನಗಾಗಿ... ಮಾಸಗಳು ಉರುಳುತ್ತಿವೆ ನಿನ್ನ ಸುಳಿವಿಲ್ಲ ಕರೆಗಂಟೆಯ ನಾದದಲಿ ನಿನ್ನ ಹೆಸರಿಲ್ಲ ಬರುವ ಸಂದೇಶದ ರಿಂಗಣದಲಿ ನಿನ್ನ ಸಂದೇಶವಿಲ್ಲ. ದೂರದ ಊರಿನ ಗೆಳೆತಿ ಎಂದಿಗೂ ದೂರವೇ ಗೆಳಯ?
----------------------------------
ನೋಂದಣಿ ಐಡಿ : KPFS2-9422