ಒಲವಿನಲಿ ಗೀಚಿದ ಸಾಲುಗಳು
ರಚನೆ : ಇರಾಜ ವೃಷಭ ಎ.
----------------------------------
ಮನದಲಿನ ನೂರು ಮಾತು ಹೇಳಲಿ ಹೇಗೆ ಗೆಳತಿ ನಗು ಚೂರು ಕಣ್ಣಲ್ಲೇ ನಾನಷ್ಟೇ ನಾಚುವಂತೆ ಎಲ್ಲಿಯೂ ಹೇಳದ ಸಾಲು ನನ್ನಲ್ಲೇ ಹೇಳು ಮೊದಲು ಪಿಸುನುಡಿದು ನೋಡು ನನ್ನ ಮತ್ಯಾರು ಕೇಳದಂತೆ ಮುದ್ದಾದ ಮಾಯೆ ನೀನು ಸದ್ದಿಲ್ಲದಂತೆ ಬಂದೆ ನಿಂತ ಈ ನೀರಿನಲ್ಲಿ ಸುಳಿಯಾಗಿ ಕಾಡಿದೆ ಚೆಲುವಾದ ಛಾಯೆ ನೀನು ಈ ಬಲಶಾಲಿಯನ್ನು ಕೊಂದೆ ಕುಂತ ಈ ಜಾಗದಲ್ಲಿ ಒಲವನ್ನು ಹಂಚಿದೆ ಜಗವನ್ನು ಬಿಟ್ಟು ಬಿಡಲು ತುದಿಗಾಲಿನಲ್ಲಿ ಇರುವೆ ನೀ ಸಿಕ್ಕರೆ ಸಾಕು ಈ ಜನ್ಮ ಪಾವನ ನನ್ನೆಲ್ಲ ಸುಖದ ಪಾಲು ನಿನಗೆಂದೆ ಮೀಸಲಿಡುವೆ ಕೈ ಹಿಡಿದು ಸಾಗು ನೀನು ಶುರುವಾಗ್ಲಿ ಜೀವನ
----------------------------------
ನೋಂದಣಿ ಐಡಿ : KPFS2-9415