ಪ್ರೀತಿಯ ಮಧುರ ರಚನೆ
ರಚನೆ : ಮಧುರ ಸಿ ಎಸ್
----------------------------------
ಅಲ್ಲೊಬ್ಬಳು ಇರುವಳು ತನ್ನವನ ಬರುವಿಕೆಗೆ ಕಾಯುತ್ತಾ ಅಂತರಾತ್ಮದಲೇ ಕಿರುನಗೆ ಬಿಡಿಸುತ್ತಾ ಕನಸಿನ ಕಾರ್ಖಾನೆಯ ಕಟ್ಟುತ್ತ ಅರಮನೆಯ ರಾಣಿ ಎಂದು ಬೀಗುತ್ತಾ. ಚಂದದ ಅಪ್ಪುಗೆಯ ವಿಮರ್ಶಿಸುತ್ತಾ ಒಗ್ಗೂಡುವ ದಿನಗಳ ನೆನೆಯುತ ಕಾಲ್ಗೆಜ್ಜೆ ಕಟ್ಟಿ ನಡೆಸುವನು ಎಂದು ಊಹಿಸುತ್ತಾ ತನ್ನೆಲ್ಲ ಆಸೆಗಳ ಕೂಡಿಸುತ್ತಾ ಪ್ರೀತಿಯ ಮಧುರ ಗಾನವ ಗೊಣಗುತ್ತಾ. ತೊಡೆಸುವನೆ ಮೂಗುತಿ? ಹೆಚ್ಚುವುದೇ ಮೊಗದ ಕಾಂತಿ? ಪ್ರಕಟಿಸುವುದೇ ಈ ಕಾಲ್ಪನಿಕ ಪ್ರೀತಿ? ಕೊಡುಗೆ ಯಾಗುವುದೇ ಇವರ ನೀತಿ? ತಿಳಿಸುವಳು ಮತ್ತೊಂದು ಕಾವ್ಯದಲ್ಲಿ.
----------------------------------
ನೋಂದಣಿ ಐಡಿ : KPFS2-9413