Submission 6216

ಮನದ ಮಾತು

ರಚನೆ : ಸಾಯಿಬಮ್ಮ ಪಿ

----------------------------------

ಎನ್ನ ಬಾಳಪಯಣದದ್ಭುತ ಪರಿಚಯವು ನೀನೆ ಆಕಸ್ಮಿಕ ವಿದಾಯದ ಆತ್ಮೀಯ ಬಂಧುವು ನೀನೆ ಅನಿಸುವುದೊಮ್ಮೊಮ್ಮೆ ಸದಾ ಮನದಿ ಮೂಡುವ ಭಾವನೆಗಳ ಚಿಲುಮೆ ನೀನೆ ಭ್ರಮಿಸುವೆನೊಮ್ಮೆಮ್ಮೆ ಎನ್ನಯ ಪ್ರತಿ ಕ್ಷಣಗಳನುಭವಗಳಿಗೆ ಕಾರಣ ನೀನೆ ಮೌನದ ಮರೆಯಲಾಚೋನೆಯ ಸೃಷ್ಟಿಯು ನೀನೆ ಮಧುರ ಭಾವಗಳಕ್ಷರ ರೂಪದ ಸ್ಫೂರ್ತಿಯು ನೀನೆ ದಿನಗಳುರುಳಿ ಮರಳುವ ನವೋತ್ಸಾಹದ ನಾಳೆಯು ನೀನೆ ಕನಸಿನ ಕಣಜಗಳ್ಹೊತ್ತು ತರುವ ಸುಂದರಿರುಳು ನೀನೆ ನಯನಗಳಲರಳುವ ಸಂತಸದ ನಗೆಗಡಲ ನಾವಿಕಳು ನೀನೆ ತುಟಿಯಂಚಲಿ ಮೂಡುವ ಬಾಡದ ಕಿರುನಗೆಯ ರುವಾರಿಯು ನೀನೆ ಕಲ್ಪನೆಯಲರಳುವ ಕನಸಿನ ಪ್ರತಿಬಿಂಬ ನಿನದೇನೆ ಹಾತೋರೆಯುವುದಲ್ಹಗಲಿರುಳು ಎನ್ನಿ ಮನವು ನಿನಗೇನೆ... ಸ್ಮೃತಿ ಕೃತಿ

----------------------------------

ನೋಂದಣಿ ಐಡಿ : KPFS2-9408

0
Votes
73
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top