ಕಲ್ಲಿನ ಕೋಟೆಯಂತಹ ಸೈನಿಕರು.
ರಚನೆ : ಶಶಾಂಕ್ ಎಲ್
----------------------------------
ದೇವರಿಗಿಂತ ಮಿಗಿಲಾದವರು ನಮ್ಮ ಸೈನಿಕರು ಹಗಲಿರುಳೆನ್ನದೇ ದೇಶವನ್ನು ಕಾಯುವರು ದೇಶದ ಜನರೆಲ್ಲ ಸದ್ದೊಯ್ದು ಮಲಗಿದರೂ ಕಣ್ಣು ಮುಚ್ಚದೆ ಜೀವನವನ್ನು ಮುಡಿಪಾಗಿಟ್ಟಿರುವರು. ದೃಷ್ಟಿ ಇಟ್ಟು ಎದುರಾಳಿಗಾಗಿ ನೋಡುತಿಹರು ಅನ್ಯ ದೇಶಕ್ಕೆ ಹೋಗಿ ಅವರನ್ನೇ ಎದುರಿಸುವರು ಎದೆಗೆ ಗುಂಡಿಟ್ಟರೂ ಹಾಕುವುದಿಲ್ಲ ಕಣ್ಣೀರು ಇನ್ನು ಹೊರಡಬೇಕೆಂಬ ಛಲದವರು. ಶೂನ್ಯಕ್ಕಿಂತ ಕಡಿಮೆ ಚಳಿಯನ್ನು ಅನುಭವಿಸುವರು ವೈರಿಗಳನು ಲೆಕ್ಕಿಸದೆ ಮುನ್ನುಗ್ಗುವರು ರಕ್ತದ ಮಾಡುವಿನಲ್ಲೂ ಹೊರಡುವರು ಈ ನಮ್ಮ ಸೈನಿಕರು...
----------------------------------
ನೋಂದಣಿ ಐಡಿ : KPFS2-9389