ವಸಂತಾಗಮನ.
ರಚನೆ : ಸಿದ್ದರಾಜು ಬಿ.ಎ.ಆರ್.
----------------------------------
ಬಂದನೋ ನೋಡಿ ವಸಂತ.ಒಣ ಎಲೆಗಳಿಗೆ ವಿರಾಮ ನೀಡುತ್ತ. ಬಿಸಿ ರವಿಯ ಜೊತೆಗೂಡಿ..ತಂಗಾಳಿಯ ಒಡನಾಡಿ ಹಸುರೆಲೆಗೆ ಜೀವ ನೀಡಿ.ಹಳೆ ಬೇರಿಗೆ ಚೈತನ್ಯದೂಡಿ ಹಕ್ಕಿಗಳ ಕಲರವ ಕೇಳಿ ಸೂರ್ಯನಿಗೆ ಶುಭೋದಯ ಹೇಳಿ ಪ್ರಕೃತಿಗೆ ಇವನನ್ನ ಸ್ವಾಗತಿಸುವ ದಾಹ ಏಕೆಂದರೆ ಇವನಲ್ಲವೇ ಋತುಗಳಿಗೆಲ್ಲ ಪಿತಾಮಹ ಕಾತರಸಿವೆ ಇವನಾಗಮನಕೆ ಫಲ ಪುಷ್ಪ ಉಡುಗೊರೆಯಂತೆ ಇವನಿಗೆ ಮಳೆಯ ಆನಂದಭಾಷ್ಪ ಹಚ್ಚುವನು ಪರಿಸರಕ್ಕೆ ಪರಿ ಪರಿ ಹಸಿರು ಬಣ್ಣ ಹಂಚುವನು ಖಗ ಮೃಗಗಳಿಗೆ ವಿಧ ವಿಧ ಹಣ್ಣ ಕಂಗೊಳಿಸಿದೆ ವಸಂತನ ಕಂಡು ಎಳೆಗರಿಕೆ ನಿಸರ್ಗಕ್ಕೆ ಇವ ಅಗಲಿದರೆ ಬಹಳ ಚಡಪಡಿಕೆ ಬಂದನೋ ವಸಂತ ಸೂರ್ಯನ ಶಾಖವ ನೀಡುತ್ತ ಜನರಲ್ಲಿ ನಗುವ ಮೂಡಿಸುತ್ತ ನಾನಿರುವೆ ಎಂದು ಭರವಸೆ ನೀಡುತ್ತ
----------------------------------
ನೋಂದಣಿ ಐಡಿ : KPFS2-9371