Submission 6142

ಅಪ್ಪ ಇಷ್ಟನಾ? ಅಮ್ಮ ಇಷ್ಟಾನ?

ರಚನೆ : ಪವನ್ ಕುಮಾರ್ ಎಂ ಎಂ

----------------------------------

ಪಲ್ಲಕ್ಕಿಯಂತ ಅಪ್ಪನ ಹೆಗಲು ರಕ್ಷಾ ಕವಚದಂತ ಅಮ್ಮನ ಮಡಿಲು ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಪ್ರತ್ಯೇಕಿಸಲು ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು ಜೀವ ನೀಡಲು ನೋವುಂಡಿದೆ ಒಡಲು ಜೀವನ ರೂಪಿಸಲು ಶ್ರಮಿಸಿದೆ ಹಗಲಿರುಳು ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಬೇರ್ಪಡಿಸಲು ಬಟ್ಟೆ ಬೇಡಂತೆ ನನಗೊಬ್ಬನಿಗೆ ಕೊಡಿಸಲು ಹೊಟ್ಟೆತುಂಬಿದೆಯಂತೆ ನನಗಷ್ಟೇ ತಿನಿಸಲು ಜೋಡಿ ಕಣ್ಣಂತಿವೆ ಆಗುತ್ತಿಲ್ಲ ಅದಲು ಬದಲು ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು ಒಂದು ಅಕ್ಷಯ ಪಾತ್ರೆ ಕೇಳಿದ್ದ ಕೊಡಿಸಲು ಇನ್ನೊಂದು ಗುರುವಿನ ಸ್ಥಾನಕ್ಕೆ ಮೊದಲು ಜೋಡಿ ಕಣ್ಣಂತಿವೆ ಆಗುತ್ತಿಲ್ಲ ವ್ಯತ್ಯಾಸ ಹೇಳಲು ಬಲು ಕಷ್ಟ ಯಾವುದಾದರೊಂದನ್ನು ಆಯ್ಕೆ ಮಾಡಲು

----------------------------------

ನೋಂದಣಿ ಐಡಿ : KPFS2-9353

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top