Submission 6116

ಗೊಂದಲದ ಸುಳಿವು

ರಚನೆ : ಚೇತನ್ ಕುಮಾರ್

----------------------------------

ಜಡತ್ವ ಬಂದಿದೆ ಸುಡುವ ಬಿಸಿಲಲ್ಲಿ ಹರಿವ ನೀರಿಗೂ ದೃಢತ್ವದ ಆಯಾ ತಪ್ಪಿದೆ ತಪೋ ಶಕ್ತಿಗಳಿಂದ ಬಂದಿಸಿಟ್ಟಿದ್ದ ಭಾವನೆಗಳಿಗೂ ಅಸ್ಪಷ್ಟದ ಮಂಪರು ಕವಿಯುವ ಸೂಚನೆಯು ನಿಚ್ಚಳವಾದ ಆಕಾಶದಂತೆ ಗೋಚರಿಸುತ್ತಿರುವ ಸ್ಪಷ್ಟನೆಗಳಿಗೂ ಗೊಂದಲಗಳ ಅಲೆಯೆದ್ದಿವೆ ಹುಣ್ಣಿಮೆಯಿಲ್ಲದ ಕಡಲಲ್ಲು ಬಂಧನದ ನೆರಳಾವರಿಸಿದೆ ಕದವಿಲ್ಲದ ಕೋಣೆಯಲ್ಲು ಹಾದಿ ತಪ್ಪಿವೆ ಹೆಜ್ಜೆಗಳು ಕವಲುಗಳಿಲ್ಲದ ದಾರಿಯಲ್ಲು ತೊದಲಾಗಿವೆ ಪದಗಳು ಈ ಬಾಯಿ ಬಡುಕನ ಕಂಠದಲ್ಲು ಕಗ್ಗತ್ತಲ್ಲ ಛಾಯೆ ಆವರಿಸಿಹುದು ಹುಣ್ಣಿಮೆಯ ಬೆಳಕಲ್ಲು ಬತ್ತಿ ಹೋಗಿ ಬರಡಾಯಿತೆ ಕಡಲ ತೀರದಲ್ಲಿ ತೆಗೆದ ಬಾವಿಯು ಕಮರಿ ಹೋದ ಗಿಡವಿದು ಸಹ್ಯಾದ್ರಿಯ ಕಾಡಿನಲ್ಲೂ ಮೋಡಿ ಮಾಡಿತು ಯಾವುದೋ ಮಾಯೆಯು ದೈವಾನುಗ್ರಹ ನಾಡಿನಲ್ಲು

----------------------------------

ನೋಂದಣಿ ಐಡಿ : KPFS2-9335

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top