Submission 6086

ಬಾಲ್ಯದ ನಾಕಾಣಿಯ ಖುಷಿನೋಟ

ರಚನೆ : ಮೇಘರಾಜ ಹವೇಲಿ

----------------------------------

ಬಾರದೆ ಇರುವ ಹಳೆಯ ನೆನಪಿನಪಕ್ಷಿನೋಟ ಚಂದಮಾಮನ ಮೊದಲ ನೋಟ ಗುಮ್ಮನ ಭಯದೊಂದಿಗೆ ಊಟ ಮಣ್ಣಿನಲ್ಲಿ ಧಣಿದ ಆಟ ಗಾಯದ ಗುರುತೊಂದಿಗೆ ಒದ್ದಾಟ ಜೋರು ಧ್ವನಿಯ ಪಾಠ ಜೇಬಿನೊಳಗೊಂದು ನಾಕಾಣಿಯ ಹುಸಿ ನೋಟ ಬರಿಗೈಯಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟ ಖಾಲಿ ಹಾಳೆಯಲಿ ಅಗ್ಗದ ನೋಟಿನ ಅಲೆದಾಟ ಕ್ಯಾಲೆಂಡರ್ ನಲ್ಲಿ ರಜಾ ದಿನಗಳ ಹುಡುಕಾಟ ೨೦ ರ ವಯಸ್ಸಿನ ಘಟ್ಟ ಮೇಲೆರಿತು ಜವಾಬ್ದಾರಿಯ ಮುನ್ನೋಟ ಮರೆಯಾದವು ಬಾಲ್ಯದ ನೆನಪುಗಳು ಕಣ್ಮುಚ್ಚಿದಾಗ ಕಲ್ಪನೆಯ ನೆನಪೊಂದಿಗೆ ಬಂದರೆ ಮತ್ತೊಮ್ಮೆ ಸುಚೇತ

----------------------------------

ನೋಂದಣಿ ಐಡಿ : KPFS2-9314

76
Votes
377
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top