ಜನಕ
ರಚನೆ : ಸಂಗನಗೌಡ ಶ. ಪಾಟೀಲ್
----------------------------------
ಆಶಾದಾಯಕವಾಗಿ ಅರಳಿತು ಮುಖದಲಿ ಆ ನಗು, ಹುಟ್ಟಿದಾಗ ನಿನ್ನೀ ಮಗು. ಮನಸು ಮುಗ್ಧ ಮಗು, ಮುಖದಲ್ಲಿ ಸದಾ ನಗು, ಗಂಡೆಂದು ಹಿಗ್ಗಲಿಲ್ಲ, ಹೆಣ್ಣೆಂದು ಕುಗ್ಗಲಿಲ್ಲ, ನಿನ್ನ ಸಮಾನತೆಯ ದೃಷ್ಟಿಗೆ — ಸಮನಾರು ಅಪ್ಪ? ನಾ ಕಾಣುವ ಕನಸುಗಳಿಗೆ ಜೀವ ತುಂಬಲೆಂದೇ, ನೀ ಕಂಡ ಕನಸುಗಳಿಗೆ ಕಣ್ಮುಚ್ಚಿದೆ ತಂದೆ. ಹಗಲು ರಾತ್ರಿ ಲೆಕ್ಕಿಸದೆ, ದಿನವೆಲ್ಲ ದುಡಿದು ಬಂದೆ, ನೀ ಪಟ್ಟ ಕಷ್ಟದ ಬೆವರಿಗೆ ಕಾರಣವೂ ನಂದೇ. ನನ್ನ ಆಸೆ-ಆಕಾಂಕ್ಷೆಗಳಿಗೆ ಬೇಲಿ ಕಟ್ಟಲಿಲ್ಲ, ನನ್ನ ಕನಸು ನಿನ್ನದೆಂದು ಒಪ್ಪಿಕೊಂಡು ಅಪ್ಪಿಕೊಂಡೆ ಅಪ್ಪ. ದೇಹವು ಮುಪ್ಪಾಯಿತು, ದ್ವೇಷವೂ ಮುಪ್ಪಾಯಿತು, ನಿನ್ನ ತ್ಯಾಗಗಳಿಗೆ ಇನ್ನೆಷ್ಟು ಆಯಸ್ಸು ಅಪ್ಪ? ನಾ ಬಯಸಿದ್ದೆಲ್ಲವನು ಆಗಿ ಬಗೆದು ತಂದೆ, ಬಯಸಿದ್ದೆಲ್ಲವೂ ನಾನೀಗ ಬೇಸರಗೊಂಡು, ನಿನ್ನನ್ನೇ ಬೇಡುತ್ತ ಬಂದೆ — ಮರಳಿ ಭೂಮಿಗೆ ಬರುವೆಯಾ ತಂದೆ?
----------------------------------
ನೋಂದಣಿ ಐಡಿ : KPFS2-9310