ಬದುಕಿನ ನೈಜತೆಗೊಂದು ಕೈಗನ್ನಡಿ
ರಚನೆ : ಕಾವ್ಯ ಹಲಗೇರಿ
----------------------------------
ಬದುಕಿನ ಜಂಜಾಟಕ್ಕಿಂತ, ಭಾವದ ಕ್ರೌರ್ಯ ಹೆಚ್ಚು ಅಂತಿದ್ದ ನನಗೆ ಅನಿರೀಕ್ಷಿತವಾಗಿ ಅಪ್ಪಳಿಸೋ ಸಂದರ್ಭಗಳು, ನಮ್ಮನ್ನ ಅತಂತ್ರತಗೆ ದೂಡಿ ಹೇಗೆ ನಿಷ್ಕ್ರಿಯಗೊಳಿಸುತ್ತವೆ ಎಂಬುದರ ಅರಿವಾಯ್ತು. ಬದುಕು ಎಂದಿಗೂ ನಮ್ಮ ಇಚ್ಛೆಯಂತೆ ಸಾಗದು. ಅದರ ನಿರ್ಣಯಗಳಿಂದ ತಪ್ಪಿಸಿಕೊಳ್ಳಲು , ಯಾವ ಸಬೂಬುಗಳಿಗೂ ಆಸ್ಪದವಿಲ್ಲ. ಅದು ಕಲಿಸಬೇಕಿರೋ ಪಾಠಗಳನ್ನ ತೀವ್ರವಾಗಿ, ಕಠೋರವಾಗಿ,ಖಡಾ ಖಂಡಿತವಾಗಿ ಕಲಿಸುತ್ತದೆ. ಬದುಕು ನನ್ನನ್ನ ನೋಯಿಸಿದರು, ಗಟ್ಟಿಗೊಳಿಸ್ತಿದೆ. ನೋವನ್ನು ಪರಿಚಯಿಸುತ್ತಾ, ಮುಂದಿನ ಸವಾಲುಗಳಿಗೆ ಅಣಿಗೊಳಿಸುತ್ತಿದೆ.
----------------------------------
ನೋಂದಣಿ ಐಡಿ : KPFS2-9262