Submission 6018

ಮತ್ತೆ ಹುಟ್ಟಿ ಬಾರೊ ಬಸವ

ರಚನೆ : ದೇವಪ್ಪ ಎಸ್ ಪಾಟೀಲ್

----------------------------------

ಮತ್ತೆ ಹುಟ್ಟಿ ಬಾರೊ ಬಸವ ಎತ್ತ ಸಾಗುತಿದೆ ನೋಡೊ ಜಗವ ll ನಿನ್ನ ನಾಮವ ಹೇಳಿಕೊಂಡು ಜನರನು ಸುಲಿಗೆ ಮಾಡಿಕೊಂಡು ಕಾಯಕ ಮರೆತ ಜನರ ದಂಡು ಮಲಗುವರು ನಿತ್ಯ ಹಸನವ ಉಂಡು ll ನೀ ಜಾತಿಭೇದ ಮಾಡಲಿಲ್ಲ ನಿನ್ನದೆ ಜಾತಿ ಮಾಡಿದರಲ್ಲ ದಾಸೋಹವನು ತಿಳಿಸಿದೆಯಲ್ಲಿ ದಾರಿದ್ರ್ಯವನು ಬಿತ್ತಿದರಲ್ಲ ll ಬಾಯಿ ತುಂಬಾ ನಿನ್ನಯ ಹೆಸರು ಮನಸಿನ ತುಂಬಾ ಜಾತಿಯ ಕೆಸರು ಮಲೀನಗೊಂಡಿದೆ ಸಮಾಜದ ಉಸಿರು ಸ್ವಚ್ಛಗೊಳಿಸಲು ಬಾರೋ ವಿಶ್ವಗುರು ll

----------------------------------

ನೋಂದಣಿ ಐಡಿ : KPFS2-9257

0
Votes
75
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top