ಜನುಮದಾತೆ
ರಚನೆ : ಸುಮದಿನೇಶ್ ಗೊರೂರು
----------------------------------
ಚೆಲುವೆ ನನ್ನ ಜನುಮದಾತೆ ಸಲಹಿ ಸಾಕಿ ಪೊರೆದ ಮಾತೆ ಹಲವು ನೋವ ನುಂಗಿಕೊಂಡು ಬಾಳಿದಾತೆಯು ಕಲಿಸಿ ವಿನಯ ಕೊಡಿಸಿ ವಿದ್ಯೆ ನಲಿಸಿ ಮರೆಸಿ ನೋವನೆಲ್ಲ ಲಲಿತವದುವೆ ತಾಯಿ ಮಡಿಲು ಸಗ್ಗ ಕಾಣಲು ಮುದದಿ ಹೊತ್ತು ಹೆತ್ತು ಪೊರೆದು ಗದರಿ ತಬ್ಬಿ ತುತ್ತು ನೀಡಿ ಬದುಕ ಲಾಲಿ ಹಾಡ ಹಾಡಿ ನಡೆಸಿದಾತೆಯು ಹೃದಯದೊಳಗೆ ನೂರು ನೋವು ವದನದಲ್ಲಿ ನಗುವ ನಟನೆ ಬದುಕ ತಮವ ಹಣತೆಯಂತೆ ಬೆಳಗಿದಾತೆಯು
----------------------------------
ನೋಂದಣಿ ಐಡಿ : KPFS2-9249