ಏಳ್ಗೆ
ರಚನೆ : ಡಾ. ಶಿವಲೀಲಾ ಎಸ್ ಮಠಪತಿ
----------------------------------
ಸಿರಿಗನ್ನಡಂ ಗೆಲ್ಗೆ ಎಲ್ಲಿದೆ ಅದರ ಏಳ್ಗೆ ಸಮಾರಂಭದಲ್ಲಿ ಅದರ ಅಲಂಕಾರ ಸಾಹಿತಿಗಳ ಮನೆಯಲ್ಲಿದೆ ಅದರ ಸಿಂಗಾರ ಕಾನೂನಿನ ಕಾಗದದಲ್ಲಿದೆ ಅದರ ಆಡಂಬರ ಇದು ಕೆಲವರ ದರ್ಬಾರ ಸರಕಾರದ ನಾಮ ಫಲಕದಲ್ಲಿದೆ ಮಾಡುವ ಹೆಸರಿನಲ್ಲಿದೆ ಪಡೆಯುವ ಪುರಸ್ಕಾರದಲ್ಲಿದೆ ನಮ್ಮದು ಎನ್ನುವ ಭ್ರಮೆಯಲ್ಲಿದೆ ಸಿರಿಗನ್ನಡಂ ಗೆಲ್ಗೆ ಎಲ್ಲಿದೆ ಅದರ ಏಳ್ಗೆ ಆಗಲಿದೆ ಅದರ ಏಳ್ಗೆ ಕನ್ನಡವೇ ನಾವು ನಾವೇ ಕನ್ನಡ ಎಂದಾಗ ಕನ್ನಡ ಜನ ದನಿಯದಾಗ ನಮ್ಮ ಉಸಿರಾದಾಗ ಮನೆಗೊಬ್ಬ ಕನ್ನಡತಿ ಹುಟ್ಟಿದಾಗ ಎಲ್ಲರ ಪ್ರೀತಿ ವಿಶ್ವಾಸದಿ ಸಂಘ ಕಟ್ಟಿದಾಗ ಆಗುವುದು ಅದರ ಏಳ್ಗೆ ಅದೇ ಸಿರಿಗನ್ನಡಂ ಗೆಲ್ಗೆ
----------------------------------
ನೋಂದಣಿ ಐಡಿ : KPFS2-9239