Submission 5990

ನಂಬಿಕೆಯ ಸಿಂಧೂರದಿಂದ ಪ್ರೀತಿಯವರೆಗೆ

ರಚನೆ : ಚೈತ್ರ ಎಸ್

----------------------------------

ನಿಷ್ಕಲ್ಮಶ ಪ್ರೀತಿ ತೋರುವವನು ಹೃದಯದ ಗೂಡಲ್ಲಿ ನನ್ನ ದೇವತೆ ಎಂದು ರೂಪಿಸಿಕೊಂಡಿರುವವನು ಮನಸ್ಸೆಂಬ ಮಂಟಪದಲ್ಲಿ ವಾಗ್ದಾನ ಭಾಷೆ ಕೈ ಬಳೆ ತೊಡಿಸಿ, ಸ್ನೇಹ,ಪ್ರೀತಿ,ಕಾಳಜಿ,ಒಗ್ಗಟ್ಟು,ನೆನೆಪು, ಬದಿತನ ಆರಾಧನೆ ಎಂಬ ಸಂಬಧಿಕರ ಸಮ್ಮುಖದಲ್ಲಿ ನಂಬಿಕೆ ಎಂಬ ಸಿಂಧೂರವನ್ನು ತೊಡಿಸಿ, ಮಾಯೆ,ಮುಡಿಪು ಎಂಬ ಬೆಲ್ಲದ ಜೊತೆ ಅಕ್ಕಿಯ ತೆರೆಯ ಮೆಲ್ಲಿಂದ ಸುರಿದು ಕದ್ದು ನೋಡುತ್ತಿರುವವನು ನನ್ನ ನಾಚಿಕೆಯ ನಗೆಯ ಜೀವನ ಕಷ್ಟ, ಸುಖ,ಗೆಲುವು,ಸೋಲು,ಜವಾಬ್ದಾರಿ, ಮಾನಸಿಕ, ಆರ್ಥಿಕ ಎಂಬ ಸಪ್ತ ವಚನಗಳನ್ನು ನೀಡಿ ಸಪ್ತಪದಿ ತುಳಿದು ಮಮತೆ, ಪ್ರಾಮಾಣಿಕತೆ,ಆತ್ಮೀಯತೆ ಎಂಬ ಮೂರು ಗಂಟನ್ನು ನನ್ನ ಕೊರಳಿಗೆ ಮಾಂಗಳಸೂತ್ರವನ್ನು ಅಲಂಕರಿಸಿ ನನ್ನ ಮನದ ಪುಟ್ಟ ಗೂಡಲ್ಲಿ ಪತಿಯಾಗಿರುವವನು ನಿಷ್ಠೆ ಎಂಬ ಅಕ್ಷತೆಯ ತಲೆ ಮೇಲೆ ಇಟ್ಟು ದೀರ್ಘಸುಮಂಗಲಿ ಎಂದು ಆಶಿರ್ವಾದಿಸಿದನು ಇದು ಮನಸಿನ ಗೂಡಲ್ಲಿ ಮೂಡಿದ ಮದುವೆಯ ಮೌನಗೀತೆ.

----------------------------------

ನೋಂದಣಿ ಐಡಿ : KPFS2-9236

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top