ಅವಳು
ರಚನೆ : ನಿರ್ಮಲ ವಿಶು
----------------------------------
ಆಕೆಗೆ ಕನಸುಗಳ ಕಟ್ಟಿ ಬದುಕುವದಷ್ಟೇ ಮಾತ್ರ ಗೊತ್ತು ಸಮಯವೂ ಕೂಡ ಜೊತೆಗೂಡಬಹುದು ಎಂಬ ಅಸೆ ಹೊತ್ತು ಅಸ್ತವ್ಯಸ್ತ ಜೀವನ ಸರಿದೂಗಿಸಿ ಒಗ್ಗೂಡಿಸುವ ಕಲೆಯು ಗೊತ್ತು ದ್ವಂದ್ವಮನವ ಒಂದೆಡೆ ಕಟ್ಟಿ ಹಾಕುವುದು ಎಷ್ಟು ಹೊತ್ತು ಮನದ ಬೇಗುದಿಗೂ ಕಂದುಕೊಂಡಳು ತನ್ನಲ್ಲೇ ಸಾಂತ್ವನ ಅತ್ತು ತನ್ನ ತಾನೇ ಸಂತೈಸಿಕೊಳ್ಳುವಳು ಸಾವಧಾನದಿಂದ ಯೋಚಿಸಿ ಮತ್ತು ತನ್ನ ಬದುಕನು ಜೀವಿಸುವಳು ರಾಗ ದ್ವೇಷಗಳಡಿ ಅತ್ತು ಮರೆ ಮಾಚಲು ನಗುವಿನ ಮುಖವಾಡ ಧರಿಸಿಹಳು ಮತ್ತು
----------------------------------
ನೋಂದಣಿ ಐಡಿ : KPFS2-9218