ಯಾರು ಕಟ್ಟುವರು...?
ರಚನೆ : ಹರೀಶ್ ಕುಮಾರ್ ಎಸ್, ಕೆ. ಎಂ. ದೊಡ್ಡಿ
----------------------------------
ಊರು ಊರಿನ ನಡುವೆ ಭಾರಿ ಹರಿಯೋ ನದಿಯಿದೆ; ಅದಕೆ ಸಂಪರ್ಕಕ್ಕಾಗಿ ಸರ್ಕಾರದವರು ಕಟ್ಟಿದ್ದಾರಂತೆ ಚೆಂದದ ಸೇತುವೆ..! ಸದ್ಯ ಒಳ್ಳೆಯದಾಯಿತು ಬಿಡಿ...! ಹೇಗೋ ಸಂಪರ್ಕ ಸುಲಭ ಮಾಡಿ....! ಒಂದೇ ಸೂರಿನಡಿಯಲ್ಲಿ ಉಸಿರ ಆಡುತ್ತಿಹರು ಜೀವಂತಿಕೆಯ ಸಾಕ್ಷಿಯಾಗಿ..! ಆದರೇನು..? ಮನ ಮನಗಳ ನಡುವೆ ಅಭಿರುಚಿ ಬದಲಾಗಿ ಭಾರಿ ಪ್ರವಾಹವೇ ಎದ್ದು ಬಿಟ್ಟಿದೆಯಂತೆ..! ಯಾರು ಕಟ್ಟುವರು ಈ ಮನಗಳ ನಡುವೆ ಸಂಬಂಧದ ಸೇತುವೆ...? ಬಿರುಕು ಬಂದರೆ ಖುಷಿ ಪಡುವವರ ನಡುವೆ....! ಯಾರು ಕಟ್ಟುವರು.....! ಯಾರು ಯಾರು..?
----------------------------------
ನೋಂದಣಿ ಐಡಿ : KPFS2-9172