Submission 5900

ಮಳೆ-ಇಳೆಯಲ್ಲಿ ಮನಸ್ಸು

ರಚನೆ : ಕಾಂತರಾಜು ಆರ್

----------------------------------

ಬೇಸರದ ವಿರಹವು ಬೆಂದು ಬೆಂದು ಆವಿಯಾಗಿದೆ ಬೆಳ್ಳಿಯ ಮೋಡದಂಚನ್ನು ಸೇರಿ ಇದೋ,ಸನಿಹದ ಮಳೆಯಾಗಿ ಚಿಟಪಟಿಸುತಾ ಕೆಳಗಿಳಿಯುತಿದೆ ಹನಿಯು ಪತ್ರಹರಿತ್ತಿಗೆ ಪತ್ರಬರೆದು ಚಿತ್ತಾರದಸಿರಿನ ಸೀರೆಯುಡಿಸಿದೆ ಸೀರೆಯನ್ನುಟ್ಟ ಪ್ರಕೃತಿಯ ಚೆಲುವು ಈ ಕಂಗಳ ಸೂರೆ ಮಾಡುತಿದೆ ಮನ ನಿಬ್ಬೆರಗಾಗಿ ಆಶ್ಚರ್ಯವ ತಬ್ಬಿದೆ ವಿಸ್ಮಯವು ಮನದಿ ವಿಸ್ತರಿಸುತಿದೆ ಬೇಸರವು ನೇಸರನ ಕಂಡಂತಾಗಿದೆ ಹೊಳೆವ ಹೊಂಗಿರಣದೆಲೆಗಳ ನೋಡಿ ಮನದಲ್ಲಿ ಸಂತಸದಲೆಗಳು ಮೂಡಿವೆ

----------------------------------

ನೋಂದಣಿ ಐಡಿ : KPFS2-9167

0
Votes
98
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top