ಕರುನಾಡು
ರಚನೆ : ಗಂಗಾಚಾರಿ
----------------------------------
ಅಂದದ ಚೆಂದದ ಚಂದನವನದ ಈ ನಾಡು ಗಿಳಿ ಗೊರವಂಕ ಕೋಗಿಲೆಗಳ ಸುಂದರ ತಾಣ ಶಿಲ್ಪಕಲೆ ತವರೂರು ಬೇಲೂರು ಹಳೆಬೀಡು ಶಿಲೆಗಳಲಿ ಕೇಳಿತೆನ್ನ ಕಿವಿಗೆ ಅಮೃತ ಗಾನ ಮಲೆನಾಡ ಮಡಿಲಲ್ಲಿ ನಿತ್ಯ ಮಳೆ ಸುರಿಯುವುದು ಜಲಧಾರೆ ನೋಡುತಿರೆ ರೋಮಾಂಚನದ ಪುಳಕ ಕರುನಾಡ ಮಣ್ಣಲ್ಲಿ ಕಾವೇರಿ ಹರಿಯುವುದು ಆ ನೀರಲ್ಲಿ ಈಜಾಡಿ ಮಾಡಿರುವೆ ಜಳಕ ಕನ್ನಡ ಕಾವ್ಯ ವಾಚನದಭಿರುಚಿಯ ನೆಪದಲಿ ಸಕ್ಕರೆಯ ಸವಿರುಚಿಯ ಸವಿಯಿತೆನ್ನ ನಾಲಿಗೆ ಅಕ್ಕರವ ಕಲಿತು ಪದಗಳನು ಕಟ್ಟಿದೆ ತಪದಲಿ ಅಮಿತಾನಂದದ ಸಿಹಿ ದೊರೆಯಿತೆನ್ನ ಪಾಲಿಗೆ ಕನ್ನಡವ ನುಡಿಯುತಲಿ ನಾನಾಗಿಹೆನು ಧನ್ಯ ಕನ್ನಡಮ್ಮನ ಸೇವೆಯಲಿ ನಾ ಪಡೆವೆ ಪುಣ್ಯ
----------------------------------
ನೋಂದಣಿ ಐಡಿ : KPFS2-9138