ಮಣ್ಣಿನ ಮಗ
ರಚನೆ : ಸುಲೋಚನಾ ಅಪ್ಪಾಸಾಹೇಬ ಮಾಲಿಪಾಟೀಲ.
----------------------------------
ನಿಸ್ವಾರ್ಥ ಭೂಸೇವೆಗೆ ನಿಂತ ಹೃದಯವಂತ ನಿಷ್ಠೆ ಸ್ವಾಭಿಮಾನದ ಗುಣ ಹೊಂದಿದಾತ ದೇಶದ ಬೆನ್ನೆಲುಬು ಮಣ್ಣಿನ ಮಗ ಅನ್ನದಾತ ಭೂಮಾತೆಯಲ್ಲಿ ಹಡೆದವ್ವನ ಕಾಣುವ ಸುತ ಜೋಡೆತ್ತುಗಳೇ ಆತನ ಪಾಲಿಗೆ ಸಹೋದರರು ಹಂಚಿಕೊಂಡಿವೆ ಜೀವನದುದ್ದಕೂ ಬವಣೆಯ ಭಾರು ಮಳೆ ಛಳಿ ಗಾಳಿ ಬಿಸಿಲೆನ್ನದೆ ಸುರಿಸಿದ ಬೆವರು ತನ್ನ ದುಡಿಮೆಯ ಉಸಿರಿನಿಂದ ಬೆಳೆವ ಪೈರು ತನ್ನ ಕಾಯಕದಲ್ಲಿ ಕೈಲಾಸವನ್ನೆ ಕಂಡ ಸಂತಸ ಪ್ರಕೃತಿಯ ಮಡಿಲಿನ ಪಶು ಪಕ್ಷಿಗಳ ಸ್ನೇಹಿತ ಮಣ್ಣಿನ ಮಗ ಪ್ರೀತಿಸುವ ಹಸಿರು ಪರಿಸರ ಮಳೆಗಾಲದ ಕೆಸರ ಆತಗೆ ಸಂತಸದ ಉಸಿರ ಬೆಳಗಿನ ಸೂರ್ಯೋದಯ ಆತನ ದೇವನು ನಮಿಸಿ ಭೂಮಿ ಉಳುವಿಗೆ ನಿಂತವನು ಹೊರ ಜಗತ್ತಿನ ಮೋಹಪಾಶಕೆ ಬೀಳದವನು
----------------------------------
ನೋಂದಣಿ ಐಡಿ : KPFS2-9134