Submission 5846

ಹುಡುಕಾಟ

ರಚನೆ : ಬೆಸಗರಹಳ್ಳಿ ಪುಟ್ಟಣ್ಣ

----------------------------------

ಹುಡುಕಾಟದ ಭರದಲ್ಲಿ ತನ್ನನೇ ಮರೆತು ಅಂಗಲಾಚಿ ಗೋಳಾಡುತಿರುವೆ ನಾ ನಿನ್ನ ಮರೆತೆನೆಂದು, ನಾ ನಿನ್ನ ಮರೆತೆನೆಂದು ನಿನ್ನೊಳಗಿರುವ ನನ್ನ ನೀ ಹುಡುಕಿದೆ ಹಣ, ವಜ್ರ - ವೈಢೂರ್ಯ, ಮಣ್ಣಿನಲಿ ! ಸುಖ, ಭೋಗ ವಸ್ತುಗಳಲಿ... ಪ್ರೀತಿ ವಾತ್ಸಲ್ಯದ ಕೊಡ ತುಂಬಿ ತಂದೆ ನಿನ್ನ ತಂದೆ-ತಾಯಿಯಾಗಿ, ಬಂಧು-ಬಳಗವಾಗಿ ಗುರು-ಮಿತ್ರರಾಗಿ, ಮಡದಿ-ಮಕ್ಕಳಾಗಿ ನೀ ಹುಡುಕುತಲೇ ಇರುವೆ ಗುಡಿ ಗೋಪುರದಲಿ ಭ್ರಮೆಯ ಧರ್ಮದಲಿ, ಜಾತಿಯಲಿ... ನಿನ್ನನೊಮ್ಮೆ ನೀ ಇಣುಕಿ ನೋಡು ನಿನ್ನ ನಗುವಿನಲ್ಲೆ ಮನೆ ಮಾಡಿರುವೆ ನಾನು ಹುಡುಕಾಟದ ಭರದಲ್ಲಿ ತನ್ನನೇ ಮರೆತಿರುವೆ ನೀನು

----------------------------------

ನೋಂದಣಿ ಐಡಿ : KPFS2-9121

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top