ಅವಳು
ರಚನೆ : ಮಂಜುಳಾ ಕೆ.ಪಿ
----------------------------------
ಮುದ್ದಾದ ಮೊಗದಿ ಚಂದ್ರನಂತೆ ಹೊಳೆದವಳು ನಾ ಅತ್ತಾಗ ಅಪ್ಪಿ ಮುದ್ದಾಡಿ ಮುತ್ತಿಕ್ಕುವಳು ವರ್ಣಿಸಲು ಪದಗಳೇ ಸಿಗದವಳು ಸಹನೆ ತ್ಯಾಗ ಪ್ರೀತಿಗೆ ಸಂಹಿತೆ ಇವಳು ಯಾರವಳು ಯಾರವಳು ಅವಳೇ ನನ್ನ ಹೆತ್ತವಳು ಬಿಂಕ ಬಿಗುಮಾನಗಳ ಅರಿವಿಲ್ಲದವಳು ಸರಸ್ವತೀ ರೂಪದಿ ವಿಧ್ಯೆ ಕಲಿಸಿದಳು ಅನುಕ್ಷಣವು ಕಣ್ಣಾಗಿ ನಮ್ಮನ್ನು ಕಾಯ್ವವಳು ಮಕ್ಕಳೇ ಆಸ್ತಿ ಎನ್ನುವ ದೈವಿ ಸ್ವರೂಪದವಳು ಯಾರವಳು ಯಾರವಳು ಅವಳೇ ನನ್ನ ಹಡೆದವಳು ತನ್ನದೆಲ್ಲವನ್ನೂ ತನ್ನವರಿಗಾಗಿ ಹಂಚುವವಳು ಗುಡಿಯೇ ಇರದ ದೇವತೆ ನನ್ನ ಹೆತ್ತವಳು
----------------------------------
ನೋಂದಣಿ ಐಡಿ : KPFS2-9086