Submission 5780

ಮೊದಲೆರಡು ಸಾಲಿನ ಕವಿತೆ

ರಚನೆ : ಪ್ರಸಾದ ಶಾನಭಾಗ

----------------------------------

ಹಳೆಯ ರೋಗಿಗೆ ಸಿಗದೆ ಮದ್ದೊಂದ ರೋಗಕೆ, ಕಾಯುವನು ಅವನು ಅನುದಿನವೂ ಸಾವಿಗೆ. ಕಾದೆನು ನಾನೂ ಲೇಖನಿಯ ಹಿಡಿದು, ಬರಬಹುದು, ಕಾದೆ, ಆ ಕವಿತೆಯಾ ಸಾಲಿಗೆ. ಬರೆಯಬೇಕೆಂದಿದ್ದೆ ಹಲವಾರು ವಿಷಯಗಳ, ಬರೆದದ್ದು ಮಾತ್ರ ಶತ್ರುಗಳ ಹೆಸರುಗಳು ಆಗಲೇ ಮನದ ಮರದಿಂದಲಿ ಹಾರಿತು ಕಾಗದದ ಅಂಚಿಗೆ ಖಯಾಲುಗಳ ಅಳಿಲು ಗಾಳಿಯಿಲ್ಲದೆ ಅವನು ಪ್ರೀತಿಯಿಂದೂದಲು ಅದು ಪಾರ್ಥ ಸಖನಿಂದ ಕದ್ದ ಕೊಳಲು! ನಿದ್ದೆ ಜೊಂಪಿಗೆ ಕಣ್ಣು ಮುಚ್ಚಲು ಇನ್ನೇನು ಹೊಳೆದವು ಒಂದೆರಡು ಅಸ್ಪಷ್ಟ ಸಾಲುಗಳು! ಕವಿತೆಯ ಸೀರೆಗೆ ಪ್ರಾಸದ ನೆರಿಗೆ, ಕವಿಯ ಲೇಖನಿಯಿಂದ ಕಾವ್ಯದ ಹೆರಿಗೆ

----------------------------------

ನೋಂದಣಿ ಐಡಿ : KPFS2-9077

187
Votes
996
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top